ರಾಸಾಯನಿಕ ದಾಳಿ ನಡೆಸಿದ್ದು ಬಶರ್ : ಫ್ರಾನ್ಸ್
Update: 2017-04-26 20:52 IST
ಪ್ಯಾರಿಸ್, ಎ. 26: ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸದ್‌ಗೆ ನಿಷ್ಠರಾಗಿರುವ ಪಡೆಗಳು ಎಪ್ರಿಲ್ 4ರಂದು ದೇಶದ ಉತ್ತರದ ಪಟ್ಟಣವೊಂದರ ನಾಗರಿಕರ ಮೇಲೆ ರಾಸಾಯನಿಕ ದಾಳಿ ನಡೆಸಿರುವುದನ್ನು ಫ್ರಾನ್ಸ್‌ನ ಗುಪ್ತಚರ ಪಡೆಗಳು ಸಂಗ್ರಹಿಸಿದ ಪುರಾವೆಗಳು ಸಾಬೀತುಪಡಿಸಿವೆ ಎಂದು ಫ್ರಾನ್ಸ್ ವಿದೇಶ ಸಚಿವ ಜೀನ್ ಮಾರ್ಕ್ ಅಯ್‌ರಾಲ್ಟ್ ಹೇಳಿದ್ದಾರೆ.
ಖಾನ್ ಶೇಖೂನ್ ನಗರದ ಮೇಲೆ ನಡೆದ ರಾಸಾಯನಿಕ ದಾಳಿಯಲ್ಲಿ 80ಕ್ಕೂ ಅಧಿಕ ನಾಗರಿಕರು ಹತರಾಗಿದ್ದಾರೆ ಹಾಗೂ 100ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ.