ಅಮೆರಿಕದಿಂದ ಇರಾನ್ ನೌಕೆಯತ್ತ ಎಚ್ಚರಿಕೆ ಬೆಳಕು

Update: 2017-04-26 15:38 GMT

ದುಬೈ, ಎ. 26: ಪರ್ಸಿಯನ್ ಕೊಲ್ಲಿಯಲ್ಲಿ ಅಮೆರಿಕ ಮತ್ತು ಇರಾನ್ ಪಡೆಗಳು ಮುಖಾಮುಖಿಯಾದ ಸಂದರ್ಭದಲ್ಲಿ, ಅಮೆರಿಕದ ಕ್ಷಿಪಣಿಯೊಂದು ಇರಾನ್‌ನ ರೆವಲೂಶನರಿ ಗಾರ್ಡ್‌ನ ನೌಕೆಯತ್ತ ಎಚ್ಚರಿಕೆಯ ಬೆಳಕೊಂದನ್ನು ಹಾಯಿಸಿದೆ ಎಂದು ಅಮೆರಿಕ ನೌಕಾಪಡೆ ಹೇಳಿದೆ.

ಇರಾನ್‌ನ ನೌಕೆಯೊಂದು ಅಮೆರಿಕದ ‘ಯುಎಸ್‌ಎಸ್ ಮಹಾನ್’ ನೌಕೆಯಿಂದ ಒಂದು ಕಿಲೋಮೀಟರ್ ಒಳಗಿನ ಅಂತರಕ್ಕೆ ಬಂದಾಗ ಅದಕ್ಕೆ ಈ ಎಚ್ಚರಿಕೆ ನೀಡಲಾಯಿತು ಎಂದು ಬಹ್ರೈನ್‌ನಲ್ಲಿ ನೆಲೆ ಹೊಂದಿರುವ 5ನೆ ನೌಕಾ ವಿಭಾಗ (ಫ್ಲೀಟ್)ದ ಲೆಫ್ಟಿನೆಂಟ್ ಇಯಾನ್ ಮೆಕಾನಾಫೆ ತಿಳಿಸಿದರು. ಘಟನೆ ಸೋಮವಾರ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News