×
Ad

ಉಳ್ಳಾಲ ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿಯ ನೂತನ ವಸತಿ ಸಮುಚ್ಚಯದ ಉದ್ಘಾಟನೆ

Update: 2017-04-26 21:12 IST

ಉಳ್ಳಾಲ, ಎ.26: ಮುಹಿಯುದ್ದೀನ್ ಜುಮಾ ಮಸೀದಿ (ಹೊಸಪಳ್ಳಿ) ಮೇಲಂಗಡಿ, ಉಳ್ಳಾಲ ಇದರ ಆಶ್ರಯದಲ್ಲಿ ಹೊಸಪಳ್ಳಿ ಆಡಳಿತ ಸಮಿತಿ ಹಾಗೂ ದಾನಿಗಳ ಸಹಾಯದಿಂದ ನಿರ್ಮಾಣಗೊಂಡ ನುಸ್ರತ್ ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಯ ವಸತಿ ಸಮುಚ್ಛಯದ ಉದ್ಘಾಟನೆಯನ್ನು ಸಮಸ್ತ ಕೇರಳ ಜಮೀಯತ್ತುಲ್ ಉಲಮಾದ ಅಧ್ಯಕ್ಷ ಸೈಯದ್ ಜಿಫ್ರಿ ಮುತ್ತುಕೋಯ ತಂಙಳ್ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಭೌತಿಕ ಲೋಕದ ಪ್ರೀತಿಯಿಂದ ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಸಂಘಟನೆ ಸ್ಥಾಪಿಸಿಲ್ಲ, ಧಾರ್ಮಿಕವಾಗಿ ಜಾಗೃತಿ ಮೂಡಿಸಿ ಧಾರ್ಮಿಕತೆ ಉಳಿಸುವ ನಿಟ್ಟಿನಲ್ಲಿ ಸಂಘಟನೆ ಕಾರ್ಯಾಚರಿಸುತ್ತಿದೆ. ಹಿಂದೆ ಯಾವುದೇ ವ್ಯವಸ್ಥೆ ಇಲ್ಲದೆ ಎಲ್ಲಾ ಕಷ್ಟಗಳನ್ನು ಸಹಿಸಿ ಧಾರ್ಮಿಕ ಬೋಧನೆ ಮಾಡಿದ್ದರು. ಆದರೆ ಇಂದು ಮೂಲಭೂತ ಸೌಕರ್ಯ, ಸಂಪತ್ತು, ಆಹಾರ ವ್ಯವಸ್ಥೆ ಎಲ್ಲವೂ ಅಭಿವೃದ್ಧಿ ಹೊಂದಿದೆ. ಧಾರ್ಮಿಕ ಕೇಂದ್ರಗಳಿಗೆ ಆದಾಯವೂ ಇದ್ದು, ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಎಂದು ಹೇಳಿದರು.

ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಹಿ, ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬ್ ಶಮೀಮ್ ಸಖಾಫಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮನಪಾ ಮಾಜಿ ಮೇಯರ್ ಕೆ.ಅಶ್ರಫ್, ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಮುಹಿಯುದ್ದೀನ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಬಾವಾ ಫಕೀರ್ ಸಾಹೇಬ್, ಪ್ರಧಾನ ಕಾರ್ಯದರ್ಶಿ ಅಬ್ದುರ್ರಝಾಕ್ ಹರೇಕಳ, ಸೈಯದ್ ಮದನಿ ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಸದಸ್ಯರಾದ ಜಮಾಲ್ ಬಾರ್ಲಿ, ಪ್ರಮುಖರಾದ ಅಕ್ಬರ್ ಉಳ್ಳಾಲ್, ಇಬ್ರಾಹಿಂ ಕೊಣಾಜೆ, ಉದ್ಯಮಿ ಸಂಶುದ್ದೀನ್ ಕುದ್ರೋಳಿ, ಪತ್ರಕರ್ತ ಹಮೀದ್ ಪತ್ತಿಕಲ್, ನೌಷಾದ್ ಅಬೂಬಕ್ಕರ್, ಖಾಲಿದ್ ಆಲಿಯಬ್ಬ, ಸಂಶುಲ್ ಉಲಮಾ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಮುಹಮ್ಮದ್, ಮಸೀದಿಯ ಪದಾಧಿಕಾರಿ ಬಶೀರ್ ಗುಂಡಿಹಿತ್ತಿಲು, ಅಬ್ದುಲ್ ಲತೀಫ್, ಯು.ಪಿ.ಹಸನಬ್ಬ, ಬಶೀರ್ ಇಸ್ಮಾಯಿಲ್, ಸೈಯದ್ ಇಬ್ರಾಹಿಂ ತಂಙಳ್, ಕುಂಞಿಬಾವ ಮೊದಲಾದವರು ಉಪಸ್ಥಿತರಿದ್ದರು.

ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಫಾರೂಕ್ ಉಳ್ಳಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವ್ಯವಸ್ಥಾಪಕ ರಹೀಂ ಮುಟ್ಟಿಕ್ಕಲ್ ಕಾರ್ಯಕ್ರಮ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News