×
Ad

ಎಲ್‌ಒಸಿ ಸಮೀಪ ಗಣತಿದಾರರು : ಭಾರತೀಯ ಸೇನೆಗೆ ಪಾಕ್ ಸೇನೆಯಿಂದ ಮಾಹಿತಿ

Update: 2017-04-26 21:16 IST

ಇಸ್ಲಾಮಾಬಾದ್, ಎ. 26: ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಜನಗಣತಿ ಕಾರ್ಯಕರ್ತರ ಚಲನವಲನಗಳ ಬಗ್ಗೆ ಮಾಹಿತಿ ನೀಡಲು ಪಾಕಿಸ್ತಾನ ಸೇನೆಯು ಭಾರತೀಯ ಸೇನೆಯ ಅಧಿಕಾರಿಗಳನ್ನು ಸಂಪರ್ಕಿಸಿದೆ.

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಜನಗಣತಿಯ ಎರಡನೆ ಹಂತ ಎಪ್ರಿಲ್ 25ರಂದು ಆರಂಭವಾಗಿದೆ ಹಾಗೂ ಅದು ಒಂದು ತಿಂಗಳ ಕಾಲ ನಡೆಯುತ್ತದೆ.
ಈ ಹಂತದಲ್ಲಿ, ಕಾಶ್ಮೀರದ ಎಲ್‌ಒಸಿ ಸಮೀಪದ ಜಿಲ್ಲೆಗಳ ಜನಗಣತಿಯೂ ನಡೆಯುತ್ತದೆ.

ಎಲ್‌ಒಸಿಗೆ ಸಮೀಪದ ನಾಗರಿಕರ ವಾಸ್ತವ್ಯದ ಸ್ಥಳಗಳಲ್ಲಿ ನಾಗರಿಕ ಮತ್ತು ಸೈನಿಕ ಗಣತಿದಾರರ ಚಲನವಲನಗಳ ಬಗ್ಗೆ ಮಾಹಿತಿ ನೀಡಲು ಭಾರತೀಯ ಸೇನೆಯನ್ನು ಸಂಪರ್ಕಿಸಲಾಗಿದೆ ಎಂದು ಹೇಳಿಕೆಯೊಂದರಲ್ಲಿ ಪಾಕಿಸ್ತಾನಿ ಸೇನೆ ತಿಳಿಸಿದೆ.

ನಾಗರಿಕ ಮತ್ತು ಸೇನಾ ಗಣತಿದಾರರ ಸುರಕ್ಷತೆಯನ್ನು ಖಾತರಿಪಡಿಸಲು ಪಾಕಿಸ್ತಾನಿ ಸೇನೆ ಈ ಕ್ರಮ ತೆಗೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News