×
Ad

ರೆಡ್‌ಬಿಲ್ಡಿಂಗ್ ಲೇನ್: ಸರ್ವೇಗೆ ತಡೆಯೊಡ್ಡಿದ ಸ್ಥಳೀಯರು

Update: 2017-04-26 22:38 IST

ಮಂಗಳೂರು, ಎ. 26: ಕಂಕನಾಡಿ ವೆಲೆನ್ಸಿಯಾ ವಾರ್ಡ್‌ನ ರಾಷ್ಟ್ರೀಯ ಹೆದ್ದಾರಿಯಿಂದ ರೆಡ್‌ಬಿಲ್ಡಿಂಗ್ ಲೇನ್ ಒಳರಸ್ತೆಯ ವಿಸ್ತರಣೆಗೆ ಸಂಬಂಧಿಸಿ ಸರ್ವೇ ನಡೆಸಲು ಬಂದಿದ್ದ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳನ್ನು ಸ್ಥಳೀಯ ನಾಗರಿಕರು ತಡೆದ ಘಟನೆ ಬುಧವಾರ ನಡೆದಿದೆ.

ರಸ್ತೆ ವಿಸ್ತರಣೆಯಿಂದ ಹಲವು ಮನೆಗಳಿಗೆ ತೊಂದರೆಯಾಗಲಿದೆ ಎಂದು ನಾಗರಿಕರು ಈ ಹಿಂದೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಯನ್ನೂ ನಡೆಸಿದ್ದರು. ಇದೀಗ ಸ್ಥಳೀಯರ ವಿರೋಧದ ನಡುವೆ ಆಗಮಿಸಿದ ಮನಪಾ ಜಂಟಿ ನಿರ್ದೇಶಕರು ಹಾಗೂ ಸಿಬ್ಬಂದಿಯನ್ನು ಇಲ್ಲಿನ ನಿವಾಸಿಗಳು ತಡೆದರು. ಅಲ್ಲದೆ, ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News