ವಕ್ಫ್ ಅನುದಾನ: ಮಹಿಳೆಯರಿಗೆ ಶೇ.5ರಷ್ಟು ಮೀಸಲಿಡಲು ಮನವಿ
Update: 2017-04-26 23:52 IST
ಮಂಗಳೂರು, ಎ.26: ರಾಜ್ಯ ಸರಕಾರವು ವಕ್ಫ್ ಇಲಾಖೆಯ ಮೂಲಕ ಮಸೀದಿಗಳಿಗೆ ಬಿಡುಗಡೆ ಮಾಡುವ ಅನುದಾನದ ಪೈಕಿ ಶೇ.5ನ್ನು ಮಹಿಳೆಯರಿಗೆ ಮೀಸಲಿಡಬೇಕು ಎಂದು ಕೆಪಿಸಿಸಿ ಮಾನವ ಹಕ್ಕುಗಳ ವಿಭಾಗದ ಕಾರ್ಯದರ್ಶಿ ಬಿ.ಎಸ್.ಹಸನಬ್ಬ ರಾಜ್ಯ ವಕ್ಫ್ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯದ ಹೆದ್ದಾರಿಗಳು ಮತ್ತು ಮುಖ್ಯ ರಸ್ತೆಯ ಬದಿಗಳಲ್ಲಿರುವ ಹೆಚ್ಚಿನ ಮಸೀದಿಗಳಲ್ಲಿ ಮುಸ್ಲಿಂ ಮಹಿಳೆಯರಿಗೆ ನಮಾಝ್ ಮಾಡಲು ವ್ಯವಸ್ಥೆಯಿಲ್ಲ. ಪುರುಷರು ಮಸೀದಿಗೆ ತೆರಳಿದರೆ ಮಹಿಳೆಯರು ತಮ್ಮ ವಾಹನದಲ್ಲಿ ಕುಳಿತು, ನಿಂತು ಹೊರಗಡೆ ಕಾಯುವಂತಾಗಿದೆ. ಹಾಗಾಗಿ ಮಸೀದಿಗಳ ಪಕ್ಕದಲ್ಲಿ ನಮಾಝ್ ಮಾಡಲು ವ್ಯವಸ್ಥೆ ಕಲ್ಪಿಸಬೇಕು. ಅದಕ್ಕಾಗಿ ವಕ್ಫ್ ಮೂಲಕ ಬಿಡುಗಡೆಯಾಗುವ ಅನುದಾನದ ಪೈಕಿ ಶೇ.5ನ್ನು ಮಹಿಳೆಯರಿಗೆ ಮೀಸಲಿಡಲು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದ್ದಾರೆ.