ಯುಪಿಎಸ್ಸಿ/ಕೆಪಿಎಸ್ಸಿ ಪರೀಕ್ಷೆಗೆ ಪೂರ್ವ ಕೋಚಿಂಗ್: ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಮಂಂಗಳೂರು, ಎ.27: 2017-18ನೆ ಸಾಲಿನಲ್ಲಿ ಯುಪಿಎಸ್ಸಿ/ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಚ್ಛಿಸುವ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಪೂರ್ವ ಕೋಚಿಂಗ್ ತರಬೇತಿ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 15 ಕೊನೆಯ ದಿನಾಂಕವಾಗಿದ್ದು, ಇಲಾಖೆಯ ವೆಬ್‌ಸೈಟ್ www.gokdom.kar.nic.inನಲ್ಲಿ ನೀಡಲಾಗಿರುವ ಲಿಂಕ್ ನ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ನಿಯಮಗಳು:
- 1. ಅಭ್ಯರ್ಥಿ ಕರ್ನಾಟಕ ರಾಜ್ಯದವರಾಗಿರಬೇಕು.
- 2. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು(ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್, ಪಾರ್ಸಿ)
- 3. ಯಾವುದಾದರೂ ಪದವಿಯನ್ನು ಮಾಡಿರಬೇಕು(ಯುಪಿಎಸಿ/ಕೆಪಿಎಸ್ಸಿ ನಿಯಮದಂತೆ)
- 4. ಕೆಟಗರಿ 1ರಲ್ಲಿ ಬರುವ ಅಭ್ಯರ್ಥಿಗಳಿಗೆ ವಾರ್ಷಿಕ ಆದಾಯ ಮಿತಿ: 4.5 ಲಕ್ಷ/ ಇತರರಿಗೆ 3.5 ಲಕ್ಷ
- 5. ಕೌನ್ಸೆಲಿಂಗ್ ನ ಸಂದರ್ಭದಲ್ಲಿ ಸಲ್ಲಿಸಲಾಗುವ ಎಲ್ಲ ದಾಖಲೆಗಳ ಮೂಲ ಪ್ರತಿಯನ್ನು ತರಬೇಕು. ಆನ್ ಲೈನಲ್ಲಿ ಅರ್ಜಿ ಸಲ್ಲಿಸುವಾಗ ಅಪ್ಲೋಡ್ ಮಾಡುವ ಅವಶ್ಯಕತೆ ಇಲ್ಲ.
- 6. ಪದವಿಯ ಅಂಕ ಮತ್ತು ಇಲಾಖೆ ನಡೆಸುವ ಪೂರ್ವ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನಾಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
- ಮಾಹಿತಿಗಳಿಗಾಗಿ ಇಲಾಖೆಯ ಅಧಿಕೃತ ವೆಬ್ ಸೈಟ್ www.gokdom.kar.nic.inಗೆ ಭೇಟಿ ನೀಡಬಹುದು.
ಇರಬೇಕಾದ ದಾಖಲೆಗಳು:
1. ಆಧಾರ್ ಕಾರ್ಡ್(ಕಡ್ಡಾಯ)
2. ಪದವಿಯ ಎಲ್ಲಾ ಸೆಮಿಸ್ಟರ್ ನ ಮಾರ್ಕ್ ಕಾರ್ಡ್ ಮತ್ತು ಪದವಿಯ ಪ್ರಮಾಣಪತ್ರ
3. ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
4. ಬ್ಯಾಂಕ್ ಪಾಸ್‌ಬುಕ್ ನ ಪ್ರತಿ
5. ಇತ್ತೀಚಿನ 2 ಪಾಸ್‌ಪೋರ್ಟ್ ಸೈಝ್‌ನ ಫೋಟೊ
6. ಸರಿಯಾದ ಅಂಚೆ ವಿಳಾಸ ಹಾಗೂ ಪಿನ್‌ಕೋಡ್ ಇರುವ ದಾಖಲೆ
ಹೆಚ್ಚಿನ ಮಾಹಿತಿಗಾಗಿ ಇರ್ಷಾದ್ ವೇಣೂರ್, ಸಂಯೋಜಕರು, ಸರಕಾರಿ ಯೋಜನೆಗಳ ಮಾಹಿತಿ ವಿಭಾಗ, ಜಮಾಅತೆ ಇಸ್ಲಾಮೀ ಹಿಂದ್, ದ.ಕ. ಜಿಲ್ಲೆ, ಮಂಗಳೂರು, ಮೊ: 9844963029, 7676413059, ssuhelpline@gmail.comನ್ನು ಸಂಪರ್ಕಿಸಬಹುದು.