×
Ad

ಆಧಾರ್ ಕಾರ್ಡ್ ನೋಂದಣಿ ಅಭಿಯಾನ ಉದ್ಘಾಟನೆ

Update: 2017-04-27 13:01 IST

ಮಂಗಳೂರು, ಎ.27: ನಗರದ ಅಕ್ಷರ ಸದನ ಅಂಗನವಾಡಿ ಕೇಂದ್ರ, ಬೋಳೂರು, ಸುಲ್ತಾನ್ ಬತ್ತೇರಿ ಬಳಿ ಇಂದು ಆಧಾರ್ ಕಾರ್ಡ್ ನೋಂದಣಿ ಅಭಿಯಾನಕ್ಕೆ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ಚಾಲನೆ ನೀಡಿದರು. ಎ.29ರವರೆಗೆ ಮೂರು ದಿನಗಳ ಕಾಲ ಆಧಾರ್ ನೋಂದಣಿ ಕಾರ್ಯ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕೊಲ್ಲಾಡಿ ಬಾಲಕೃಷ್ಣ ರೈ, ಚಂದ್ರಹಾಸ ಕರ್ಕೇರ, ಕುಮುದಾಕ್ಷಿ, ಯಶವಂತಿ ಮೆಂಡನ್, ಗಣೇಶ್ ಪೂಜಾರಿ ಬಲ್ಲಾಳ್‌ಬಾಗ್, ಚಂದ್ರಶೇಖರ್ ಗಟ್ಟಿ ಬೋಳೂರು, ಎನ್.ಪಿ. ಮನುರಾಜ್, ಸತೀಶ್ ಪೆಂಗಲ್, ಹಬೀಬುಲ್ಲ ಕಣ್ಣೂರು, ಮಾಜಿ ಕಾರ್ಪೋರೇಟರ್ ಕಮಲಾಕ್ಷ ಸಾಲ್ಯಾನ್, ಶಶಿಕಾಂತ್ ಶೆಟ್ಟಿ ಉಪಸ್ಥಿತರಿದ್ದರು

ನಾಗೇಂದ್ರ ಕುಮಾರ್ ಸ್ವಾಗತಿಸಿದರು, ನವೀನ್ ಸ್ಟೀವನ್ ಕಾರ್ಯಕ್ರಮ ನಿರೂಪಿಸಿದರು, ದೀಪಕ್ ಕುಮಾರ್ ಬೊಕ್ಕಪಟ್ಣ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News