×
Ad

ಎ.ಕೆ. ಗ್ರೂಪ್ ನ ನೂತನ ಕಂಪೆನಿ ಅಕೋಲೈಟ್ ಇಂಡಸ್ಟ್ರಿಯಲ್ ಸಿಸ್ಟಮ್ಸ್ ಪ್ರೈ.ಲಿ.ಶುಭಾರಂಭ

Update: 2017-04-27 13:25 IST

ಬೈಕಂಪಾಡಿ, ಎ.27: ಪ್ರತಿಷ್ಠಿತ  ಎ.ಕೆ. ಗ್ರೂಪ್ ಆಫ್ ಕಂಪೆನೀಸ್ ನ ನೂತನ ಅಂಗಸಂಸ್ಥೆ ಅಕೋಲೈಟ್ ಇಂಡಸ್ಟ್ರಿಯಲ್ ಸಿಸ್ಟಮ್ಸ್ ಪ್ರೈ.ಲಿ. ಬೈಕಂಪಾಡಿಯಲ್ಲಿ ಇಂದು ಶುಭಾರಂಭಗೊಂಡಿತು.

ಮಸ್ಜಿದುನ್ನೂರ್ ಖತೀಬ್ ಅಬ್ದುಲ್ ಅಝೀಝ್ ಮೌಲವಿ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಎ.ಕೆ.ಗ್ರೂಪ್ ಅಧ್ಯಕ್ಷ  ಮುಹಮ್ಮದ್ ಅಹ್ಮದ್, ಸಂಸ್ಥೆಯ ನಿರ್ದೇಶಕರು, ಕುಟುಂಬಸ್ಥರು, ಮಿತ್ರರು, ಹಿತೈಷಿಗಳು  ಭಾಗವಹಿಸಿದ್ದರು.

ಈ ಘಟಕವು ತನ್ನ ಪೇಟೆಂಟೆಡ್ ಮತ್ತು ಎಮಿಷನ್ ಸರ್ಟಿಫೈಡ್ ಪ್ರಕ್ರಿಯೆಯ ಮೂಲಕ ತೋಟಗಾರಿಕೆ ಆಧಾರಿತ ತೆಂಗಿನ ಕಚ್ಛಾ ಸಾಮಗ್ರಿಗಳನ್ನು ಉಪಯೋಗಿಸಿ ಸಾಂದ್ರೀಕೃತ ಮರದ ಫಲಕಗಳನ್ನು ಉತ್ಪಾದಿಸಲಿದೆ. ಎಎಸ್ ಟಿಎಂಡಿ 6007-14ನಂತೆ ಸಿಎಆರ್ ಬಿ 2ನೆ ಹಂತದ ಅಂತಾರಾಷ್ಟ್ರೀಯ ಫಾರ್ಮಲ್ಡಿಹೈಡ್ ಎಮಿಷನ್ ರೇಟಿಂಗ್ ಪಡೆದಿರುವ  ಭಾರತದ ಮೊದಲ ಪ್ಲೈವುಡ್ ತಯಾರಿಕಾ ಕಂಪೆನಿ ಎಂಬ ಹೆಗ್ಗಳಿಕೆಗೆ ಅಕೋಲೈಟ್ ಪಾತ್ರವಾಗಿದೆ. ಕರ್ನಾಟಕದಲ್ಲೇ ಮೊತ್ತಮೊದಲ ಬಾರಿಗೆ ಈ ಅತ್ಯಾಧುನಿಕ ವ್ಯವಸ್ಥೆಗಳನ್ನು ಬಳಸಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News