×
Ad

ಮಂಗಳೂರು:ಕೇಂದ್ರ ಸರಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

Update: 2017-04-27 17:27 IST

ಮಂಗಳೂರು, ಎ.27: ಕೇಂದ್ರ ಸರಕಾರವು ಆಹಾರ ಸಹಿತ ಎಲ್ಲ ರೀತಿಯ ಸಾಮಗ್ರಿಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ವಿಫಲವಾಗಿದೆ ಎಂದು ಆರೋಪಿಸಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಮಾತನಾಡಿ, ಕೇಂದ್ರ ಸರಕಾರ ಜನಪರ ಆಡಳಿತ ನಡೆಸುತ್ತೇವೆ ಎನ್ನುತ್ತಾ ದುರಾಡಳಿತ ನಡೆಸುತ್ತಿವೆ. ಬೆಲೆಗಳ ಏರಿಕೆಯನ್ನು ತಡೆಗಟ್ಟಲು ವಿಫಲವಾಗಿದೆ. ದಿನದಿಂದ ದಿನಕ್ಕೆ ಬೆಲೆಗಳ ಏರಿಕೆಯಾಗುತ್ತಲೇ ಇದೆ. ಅಭಿವೃದ್ಧಿ ವಿಷಯದಲ್ಲೂ ರಾಜಕೀಯ ಮಾಡುತ್ತಿವೆ. ಎನ್‌ಡಿಎ ಮಿತ್ರ ಪಕ್ಷಗಳು ಆಡಳಿತದಲ್ಲಿಲ್ಲದ ರಾಜ್ಯಗಳಿಗೆ ನೀಡುವ ಅನುದಾನ ವಿತರಣೆಯಲ್ಲಿ ತಾರತಮ್ಯ ಎಸಗುತ್ತಿವೆ ಎಂದು ಆಪಾದಿಸಿದರು.

ಜನರಿಕ್ ಔಷಧದ ಹೆಸರಿನಲ್ಲಿ ಆ ಔಷಧವನ್ನು ಉತ್ಪನ್ನ ಮಾಡಲು, ತನಗೆ ಬೇಕಾದ ಕಂಪೆನಿಗೆ ನೀಡಲು ಪ್ರಧಾನಿ ನರೇಂದ್ರ ಮೋದಿ ಷಡ್ಯಂತ್ರ ನಡೆಸುತ್ತಿದ್ದಾರೆ.ಅದಕ್ಕಾಗಿ ಕಡ್ಡಾಯವಾಗಿ ವೈದ್ಯರು ಜನರಿಕ್ ಔಷಧಿಯ ಚೀಟಿ ನೀಡಲು ಸೂಚನೆ ನೀಡಲಾಗುತ್ತಿದೆ ಎಂದು ಮಿಥುನ್ ರೈ ಹೇಳಿದರು.

ಮೇಯರ್ ಕವಿತಾ ಸನಿಲ್, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುರ್ರವೂಫ್ ಬಜಾಲ್, ಕಾರ್ಪೊರೇಟರ್‌ಗಳಾದ ಪ್ರವೀಣ್ ಚಂದ್ರ ಆಳ್ವ, ಪ್ರೇಮಚಂದ್ರ, ಜಿಪಂ ಸದಸ್ಯ ಯು.ಪಿ.ಇಬ್ರಾಹೀಂ, ತಾಪಂ ಸದಸ್ಯರಾದ ಬಶೀರ್ ಜೋಕಟ್ಟೆ, ಸಚಿನ್ ಅಡಪ, ಯುವ ಕಾಂಗ್ರೆಸ್ ಮುಖಂಡರಾದ ಸುಹೈಲ್ ಕಂದಕ್, ಧನಂಜಯ ಮಟ್ಟಾರು, ನಝರ್ ಷಾ ಪಟ್ಟೋರಿ, ಚಂದ್ರಹಾಸ ಸನಿಲ್, ಅಮೃತ ಕದ್ರಿ, ಫವಾಝ್ ಪ್ರಶಾಂತ್ ಕುಮಾರ್, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News