ಯೆನೆಪೊಯ ಕಾಲೇಜು: ವಿ.ಟಿ.ಯು. ಅಂತರ್‌ವಲಯ ಮಹಿಳೆಯರ ಹಾಗೂ ಪುರುಷರ ಕಬಡ್ಡಿ ಪಂದ್ಯಾಟ
Update: 2017-04-27 18:46 IST
ಮೂಡುಬಿದಿರೆ, ಎ.27: ತೋಡಾರಿನ ಯೆನೆಪೊಯ ಎಂಜಿನಿಯರಿಂಗ್ ಕಾಲೇಜ್ ಮೈದಾನದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ, ಬೆಳಗಾವಿ ಮತ್ತು ಯೆನೆಪೊಯ ತಾಂತ್ರಿಕ ವಿದ್ಯಾಲಯ ಮೂಡುಬಿದಿರೆ ಇವುಗಳ ಸಹಭಾಗಿತ್ವದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಅಂತರ್‌ವಲಯ ಮಹಿಳೆಯರ ಹಾಗೂ ಪುರುಷರ ಕಬಡ್ಡಿ ಪಂದ್ಯಾಟವು ಗುರುವಾರ ನಡೆಯಿತು.
ಮಂಗಳೂರು ದೇರಳಕಟ್ಟೆ ಯೆನೆಪೊಯ ವಿವಿಯ ಕುಲಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪಂದ್ಯಾಟಕ್ಕೆ ಚಾಲನೆಯನ್ನು ನೀಡಿದರು.
ಯೆನೆಪೋಯ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಆರ್.ಜಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ರಾಷ್ಟ್ರ ಮಟ್ಟದ ಕ್ರೀಡಾಪಟು ಸುಕೇಶ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಉಪನ್ಯಾಸಕಿ ಸುಷ್ಮಾ ಸ್ವಾಗತಿಸಿದರು. ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿದೇರ್ಶಕ ಲೋಕೇಶ್ ವಂದಿಸಿದರು.