×
Ad

ಜಲೀಲ್ ಹಂತಕರನ್ನು ಬಂಧಿಸದಿದ್ದಲ್ಲಿ ಪ್ರತಿಭಟನೆ: ಪಿಎಫ್ ಐ ಎಚ್ಚರಿಕೆ

Update: 2017-04-27 20:10 IST

ಬಂಟ್ವಾಳ, ಎ. 27: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್‌ ಹಂತಕರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಜರಗಿಸದಿದ್ದರೆ ತಾಲೂಕಿನಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ಎಚ್ಚರಿಕೆ ನೀಡಿದೆ.

ಹತ್ಯೆ ನಡೆದ ಎರಡು ದಿನಗಳಲ್ಲಿ ಹಂತಕರನ್ನು ಬಂಧಿಸುವುದಾಗಿ ಹೇಳಿದ್ದ ಪೊಲೀಸ್ ಇಲಾಖೆ, ಹತ್ಯೆ ನಡೆದು ಇಂದಿಗೆ 8 ದಿನಗಳು ಕಳೆದರೂ ಹಂತಕರನ್ನು ಬಂಧಿಸದಿರುವುದು ಖಂಡನೀಯ. ನೈಜ ಹಂತಕರನ್ನು ರಕ್ಷಿಸುವ ಕೆಲಸ ಪೊಲೀಸ್ ಇಲಾಖೆಯಿಂದ ನಡೆಯುತ್ತಿದೆ ಎಂಬ ಆರೋಪ ಪೊಲೀಸರೊಂದಿಗೆ ನಿಕಟ ಸಂಪರ್ಕದಲ್ಲಿರುವವರಿಂದ ಕೇಳಿ ಬರುತ್ತಿದೆ. ಇತ್ತೀಚೆಗೆ ಕರೋಪಾಡಿ ಗ್ರಾಮದ ಮುಗುಳಿ ಎಂಬಲ್ಲಿನ ಪೊದೆಯಲ್ಲಿ ಎರಡು ಬೈಕುಗಳು ಹಾಗೂ ಮಾರಕಾಸ್ತ್ರಗಳನ್ನು ಎಸೆದು ಪ್ರಕರಣದ ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪಿಎಫ್ಐ ಪ್ರಕಟನೆಯಲ್ಲಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News