ಕೆನಡ: ಸಿಖ್ ಪೊಲೀಸ್ ಅಧಿಕಾರಿಗೆ ಭಡ್ತಿ ನಿರಾಕರಣೆ

Update: 2017-04-27 15:30 GMT

ಟೊರಾಂಟೊ (ಕೆನಡ), ಎ. 27: ಕೆನಡದ ಸಿಖ್ ಪೊಲೀಸ್ ಅಧಿಕಾರಿಯೊಬ್ಬರಿಗೆ ಅವರ ಭಿನ್ನ ಜನಾಂಗ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿಂದಾಗಿ ಭಡ್ತಿ ನಿರಾಕರಿಸಲಾಗಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಪೀಲ್ ಪೊಲೀಸ್ ಪಡೆಯಲ್ಲಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸ್ಟಾಫ್ ಸಾರ್ಜಂಟ್ ಬಲ್ಜೀವನ್ ಸಂಧು, ತನಗೆ ಇನ್ಸ್‌ಪೆಕ್ಟರ್ ಆಗಿ ಭಡ್ತಿ ನೀಡುವಂತೆ 2013ರಲ್ಲಿ ಕೋರಿಕೆ ಸಲ್ಲಿಸಿದ್ದರು ಎಂದು ಕೆನಡಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್ ವರದಿ ಮಾಡಿದೆ.

‘‘ಅರ್ಜಿದಾರನ ಜನಾಂಗ, ಹುಟ್ಟಿದ ಸ್ಥಳ ಮತ್ತು ಜನಾಂಗೀಯ ಮೂಲಗಳನ್ನು ಪರಿಗಣಿಸಿ 2013ರ ಫೆಬ್ರವರಿಯಲ್ಲಿ ಅವರಿಗೆ ಭಡ್ತಿಯನ್ನು ನಿರಾಕರಿಸಲಾಯಿತು. ಹಾಗಾಗಿ, ಅರ್ಜಿದಾರರನ್ನು ಜನಾಂಗೀಯ ಕಾರಣಕ್ಕಾಗಿ ತಾರತಮ್ಯಕ್ಕೆ ಗುರಿಪಡಿಸಲಾಗಿದೆ ಎಂಬ ತೀರ್ಮಾನಕ್ಕೆ ನಾನು ಬಂದಿದ್ದೇನೆ’’ ಎಂದು ಒಂಟಾರಿಯೊದ ಮಾನವಹಕ್ಕುಗಳ ನ್ಯಾಯಮಂಡಳಿಯ ನ್ಯಾಯಾಧೀಶ ಬ್ರೂಸ್ ಬೆಸ್ಟ್ ಹೇಳಿರುವುದಾಗಿ ಕಾರ್ಪೊರೇಶನ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News