×
Ad

​ಗಾಝಾ ವಿದ್ಯುತ್‌ಗೆ ಹಣ ನೀಡುವುದಿಲ್ಲ : ಇಸ್ರೇಲ್‌ಗೆ ಫೆಲೆಸ್ತೀನ್ ಪ್ರಾಧಿಕಾರ

Update: 2017-04-27 21:18 IST

ಜೆರುಸಲೇಂ (ಇಸ್ರೇಲ್), ಎ. 27: ಇಸ್ರೇಲ್ ಗಾಝಾಕ್ಕೆ ಪೂರೈಸುತ್ತಿರುವ ವಿದ್ಯುತ್‌ಗೆ ಇನ್ನು ಮುಂದೆ ತಾನು ಹಣ ನೀಡುವುದಿಲ್ಲ ಎಂಬುದಾಗಿ ಫೆಲೆಸ್ತೀನ್ ಪ್ರಾಧಿಕಾರ ಇಸ್ರೇಲ್‌ಗೆ ಗುರುವಾರ ತಿಳಿಸಿದೆ ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ

ಈಗಾಗಲೇ ಗಾಝಾದಲ್ಲಿರುವ ಸುಮಾರು 20 ಲಕ್ಷ ಮಂದಿ ವಿದ್ಯುತ್ ಇಲ್ಲದೆ ದಿನದ ಹೆಚ್ಚಿನ ಅವಧಿಯನ್ನು ಕಳೆಯುತ್ತಿದ್ದಾರೆ ಹಾಗೂ ಈ ಬೆಳವಣಿಗೆಯಿಂದಾಗಿ ಅಲ್ಲಿ ಸಂಪೂರ್ಣ ವಿದ್ಯುತ್ ನಿಲುಗಡೆಯಾಗಬಹುದು ಎಂದು ಹೇಳಲಾಗಿದೆ.

ಗಾಝಾದ ನಿಯಂತ್ರಣ ಹೊಂದಿರುವ ಹಮಾಸ್ ವಿರುದ್ಧ ಫೆಲೆಸ್ತೀನ್ ಪ್ರಾಧಿಕಾರ ತೆಗೆದುಕೊಳ್ಳುತ್ತಿರುವ ಕಠಿಣ ನಿಲುವಿನ ಭಾಗ ಇದಾಗಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News