×
Ad

​‘ಶಾಲಿಮಾರ್ ಲಿವರ್‌ಪೂಲ್’ ವಸತಿ ಸಮುಚ್ಚಯ ಉದ್ಘಾಟನೆ

Update: 2017-04-27 21:39 IST

ಮಂಗಳೂರು, ಎ.27: "ಶಾಲಿಮಾರ್ ಬಿಲ್ಡರ್ಸ್‌ ಆ್ಯಂಡ್ ಪ್ರಮೋಟರ್ಸ್‌" ಸಂಸ್ಥೆಯಿಂದ ನಗರದ ಹೃದಯಭಾಗವಾದ ಬೆಂದೂರ್‌ವೆಲ್‌ನಲ್ಲಿ ಅತ್ಯಾಧುನಿಕ ಸೌಲಭ್ಯ ಹಾಗೂ ಆಕರ್ಷಕ ವಿನ್ಯಾಸದೊಂದಿಗೆ ನಿರ್ಮಾಣಗೊಂಡ ಐಶಾರಾಮಿ ‘ಶಾಲಿಮಾರ್ ಲಿವರ್‌ಪೂಲ್’ ವಸತಿ ಸಮುಚ್ಚಯ ಗುರುವಾರ ಉದ್ಘಾಟನೆಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಮಂಗಳೂರು ನಗರಕ್ಕೆ ಬಿಲ್ಡರ್ಸ್‌ಗಳ ಕೊಡುಗೆ ಹಿರಿದಾಗಿದೆ. ನಗರವನ್ನು ಸುಂದರಗೊಳಿಸುವಲ್ಲಿ ಬಿಲ್ಡರ್ಸ್‌ಗಳ ಪಾತ್ರ ಮಹತ್ವದ್ದಾಗಿದೆ. ಬಿಲ್ಡರ್ಸ್‌ಗಳ ಕೊಡುಗೆ ಸ್ಮಾರ್ಟ್ ಸಿಟಿ ಯೋಜನೆಗೆ ಪೂರಕವಾಗಿದೆ ಎಂದರು.

ಕ್ರೆಡೈ ಅಧ್ಯಕ್ಷ ಡಿ.ಬಿ.ಮೆಹ್ತಾ ಮಾತನಾಡಿ, ಫ್ಲ್ಯಾಟ್‌ಗಳನ್ನು ಖರೀದಿಸುವವರಿಗೆ ಇದು ಸಕಾಲವಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಕಾಯ್ದೆಗಳ ಜಾರಿಯಿಂದ ದರಗಳು ಹೆಚ್ಚಾಗಲಿದೆ. ಗ್ರಾಹಕರು ಗುಣಮಟ್ಟದ ಫ್ಲ್ಯಾಟ್‌ಗಳಿಗಾಗಿ ಕ್ರೆಡೈ ಸದಸ್ಯರ ಫ್ಲ್ಯಾಟ್‌ಗಳನ್ನು ಖರೀದಿಸುವಂತೆ ಮನವಿ ಮಾಡಿದರು.

ಕಾರ್ಪೊರೇಟರ್ ನವೀನ್ ಡಿಸೋಜ ಮಾತನಾಡಿ, ಶಾಲಿಮಾರ್‌ನವರು ಕೇವಲ 2.4 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಿರುವುದು ಶ್ಲಾಘನೀಯ ಎಂದು ಸಂಸ್ಥೆಯನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಯೂಸುಫ್ ಕೆ. ಸುರಿಬೈಲ್, ಖಾದರ್, ಸಂಸ್ಥೆಯ ನಿರ್ದೇಶಕರಾದ ಬಶೀರ್ ಅಹ್ಮದ್, ಶಬೀರ್ ಸಾಹೇಬ್, ಅಬ್ದುರ್ರಹ್ಮಾನ್ ಉಪಸ್ಥಿತರಿದ್ದರು.

ಬಶೀರ್ ಅಹ್ಮದ್ ಸ್ವಾಗತಿಸಿದರು. ಶಬೀರ್ ಪುತ್ರ ಸಾಹಿಲ್ ವಂದಿಸಿದರು.

ವಿಶಾಲವಾಗಿ ಹಾಗೂ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಂಡಿರುವ ‘ಶಾಲಿಮಾರ್ ಲಿವರ್‌ಪೂಲ್’ ವಸತಿ ಸಮುಚ್ಚಯದಲ್ಲಿ 15 ಅಂತಸ್ತುಗಳಿವೆ. ಪ್ರತಿ ಅಂತಸ್ತಿನಲ್ಲಿ ನಾಲ್ಕು ಫ್ಲಾಟ್‌ಗಳಿವೆ. 2, 3 ಮತ್ತು 4 ಬೆಡ್‌ರೂಂ, ಕಿಚನ್‌ಗಳ ಅಪಾರ್ಟ್‌ಮೆಂಟ್‌ಗಳು ಮತ್ತು 4 ಬೆಡ್‌ರೂಂಗಳ ಡ್ಯೂಪ್ಲೆ ಅಪಾರ್ಟ್‌ಮೆಂಟ್‌ಗಳನ್ನು ಸಮುಚ್ಚಯ ಹೊಂದಿದೆ.

ಪ್ರಾರ್ಥನಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು, ಮಾರುಕಟ್ಟೆ, ಶಾಪಿಂಗ್ ಮಾಲ್, ಆರೋಗ್ಯಕೇಂದ್ರಗಳು ಮುಂತಾದ ಸೌಲಭ್ಯಗಳು ಈ ವಸತಿ ಸಮುಚ್ಚಯದ ಆಸುಪಾಸಿನಲ್ಲಿವೆ. ವಿಶಾಲ ರೂಂಗಳು, ದೊಡ್ಡಗಾತ್ರದ ಕಿಟಕಿಗಳು, ಅತ್ಯುತ್ತಮ ವೆಂಟಿಲೇಶನ್, ಕಟ್ಟಡದ ಸುತ್ತಲೂ ವಿಶಾಲ ಸ್ಥಳಾವಕಾಶವಿದೆ. ಲಿವಿಂಗ್ ರೂಂ, ಬೆಡ್‌ರೂಂ, ಡೈನಿಂಗ್ ಹಾಲ್ ಹಾಗೂ ಕಿಚನ್‌ಗಳನ್ನು ವ್ಯವಸ್ಥಿತವಾಗಿ ವಿನ್ಯಾಸಗೊಳಿಸಲಾಗಿದೆ. ಪ್ರತಿಯೊಂದು ಪರಿಕರಗಳಲ್ಲೂ ಗುಣಮಟ್ಟ ಹಾಗೂ ಆಧುನಿಕತೆಗೆ ಆದ್ಯತೆ ನೀಡಲಾಗಿದೆ. ಕಲ್ಲಿಕೋಟೆಯ ಪ್ರಸಿದ್ಧ ಎನ್.ಎಂ.ಸಲೀಂ ಅಸೋಸಿಯೇಟ್ಸ್ ಆರ್ಕಿಟೆಕ್ಟ್‌ಗಳಾಗಿದ್ದು, ವಿನೂತನ ಶೈಲಿ ಹಾಗೂ ಸ್ಥಳಾವಕಾಶದಲ್ಲಿ ‘ಲಿವರ್‌ಪೂಲ್’ ನಿರ್ಮಾಣಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News