ಎ.28: ವೆಸ್ಟ್ ಲೈನ್ ಗ್ರೂಪ್ ನಿಂದ ಫೋರಂ ಫಿಝಾ ಮಾಲ್ ನಲ್ಲಿ "ಹೆಲ್ತ್ ಶಾಪ್" ಶುಭಾರಂಭ
ಮಂಗಳೂರು , ಎ.27: ವೆಸ್ಟ್ ಲೈನ್ ಗ್ರೂಪ್ ನಿಂದ ವಿನೂತನ "ಹೆಲ್ತ್ ಶಾಪ್" ನಗರದ ಫೋರಂ ಫಿಝಾ ಮಾಲ್ ನಲ್ಲಿ ಎ.28ರಂದು ಬೆಳಗ್ಗೆ ಉದ್ಘಾಟನೆಯಾಗಲಿದೆ. ಔಷಧ, ಕಾಸ್ಮೆಟಿಕ್ಸ್, ಆಯುರ್ವೇದಿಕ್ , ಹರ್ಬಲ್, ಸಾವಯವ ಹಾಗೂ ಇತರ ಉತ್ಪನ್ನಗಳು ಜನರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವ ವಿಶಿಷ್ಟ ಮಳಿಗೆ ಇದಾಗಿದೆ ಎಂದು ವೆಸ್ಟ್ ಲೈನ್ ಗ್ರೂಪ್ ನ ಅಧ್ಯಕ್ಷ ನಾಸಿರ್ ಮೊಹಿದಿನ್ ಹೇಳಿದ್ದಾರೆ.
"ನಾವು ಮೂರನೇ ಹಂತದ ನಗರಗಳಿಂದ, ಎರಡನೇ ಹಂತದ ನಗರಕ್ಕೆ ಹಾಗೂ ದೊಡ್ಡ ನಗರಗಳಿಗೆ ಈ ಉದ್ಯಮವನ್ನು ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದೇವೆ. ಈಗ ಶಾಪ್ ಮೂಲಕ ರಿಟೇಲ್ ಮಾರಾಟ ಪ್ರಾರಂಭಿಸಿದ್ದೇವೆ. ಹಂತ ಹಂತವಾಗಿ ಆನ್ ಲೈನ್, ವಾಟ್ಸ್ಯಾಪ್ ಮೂಲಕ ಮನೆ ಬಾಗಿಲಿಗೆ ಉತ್ಪನ್ನಗಳ ಮಾರಾಟವನ್ನು ಪ್ರಾರಂಭಿಸುತ್ತೇವೆ. ಅತ್ಯುತ್ತಮ ಉತ್ಪನ್ನಗಳನ್ನು, ಗ್ರಾಹಕಸ್ನೇಹಿ ಬೆಲೆಗೆ ನೀಡುವುದೇ ನಮ್ಮ ಗುರಿ" ಎಂದು ನಾಸಿರ್ ಹೇಳಿದರು.
ಫೋರಂ ಫಿಝಾ ಮಾಲ್ ನ ನೆಲ ಮಹಡಿಯಲ್ಲಿರುವ "ಸ್ಪಾರ್ ಸೂಪರ್ ಮಾರ್ಕೆಟ್" ಮುಂಭಾಗ ಹೆಲ್ತ್ ಶಾಪ್ ಪ್ರಾರಂಭವಾಗಲಿದೆ. ಔಷಧಿಗಳು, ಪ್ರತಿಷ್ಠಿತ ಬ್ರಾಂಡ್ ಗಳಾದ ಮೇಬೆಲಿನ್ , ಲ್ಯಾಕ್ಮೇ , ಕಲರ್ ಬಾರ್ , ರೆವಲಾನ್ , ಲಾರಿಯಲ್ , ಫೇಸಸ್ , ಕಲರ್ ಎಸೆನ್ಸ್, ವೆಲ್ಲ, ಬ್ಲಾಸಂ ಕೋಶರ್ , ಜೋವಿಸ್ , ಸೆಬ ಮೆಡ್ , ಖಾದಿ ನ್ಯಾಚುರಲ್ಸ್, ಆರ್ಗ್ಯಾನಿಕ್ ಇಂಡಿಯಾ, ಕೀವಾ ಹರ್ಬಲ್ಸ್, ಟೈರೊನ್ ಉತ್ಪನ್ನಗಳು ರಿಯಾಯಿತಿ ದರದಲ್ಲಿ ವರ್ಷವಿಡೀ ಲಭ್ಯವಿರಲಿವೆ ಎಂದವರು ಹೇಳಿದರು.
ಈ ಸಂದರ್ಭ ಸಿಇಒ ಸರ್ಫರಾಝ್ ಶಮನಾಡ್ , ವೆಸ್ಟ್ ಲೈನ್ ಗ್ರೂಪ್ ನ ನಿರ್ದೇಶಕ ಯಾಸಿರ್ ರಹ್ಮಾನ್ ಹಾಗೂ ನೂತನ ಮಳಿಗೆಯ ಫಾರ್ಮಸಿಸ್ಟ್ ಗಳ ತಂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.