×
Ad

ಗೋಳಿಯಂಗಡಿ: ಕಳ್ಳತನ ಆರೋಪಿಯ ಬಂಧನ

Update: 2017-04-28 12:14 IST

ಬೆಳ್ತಂಗಡಿ, ಎ.28: ಬೆಳ್ತಂಗಡಿ ತಾಲೂಕಿನ ವೇಣೂರು ಠಾಣಾ ವ್ಯಾಪ್ತಿಯ ಗೋಳಿಯಂಗಡಿ ಬಳಿಯ ಅಂಗಡಿಗೆ ನುಗ್ಗಿ ಕಳ್ಳತನ ಮಾಡಿದ ಆರೋಪಿಯನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.

ಮೂಡಬಿದ್ರೆಯ ನಿವಾಸಿ ಪ್ರಸಾದ್ ಪೂಜಾರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನ ಬಳಿಯಿದ್ದ 3 ಮೊಬೈಲ್ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಪ್ರಸಾದ್ ಈ ಹಿಂದೆ ಮೂಡುಬಿದಿರೆ ಕಳವು ಕೇಸಿನಲ್ಲಿ 4 ವರ್ಷ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸಿ ಇತ್ತಿಚೆಗೆ ಹೊರಬಂದಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News