ಸುಕ್ಮಾ ದಾಳಿ ಸ್ಥಳದಲ್ಲಿ ನಕ್ಸಲ್ ಶವ ಪತ್ತೆ

Update: 2017-04-28 09:07 GMT

ರಾಯ್‌ಪುರ,ಎ.28: ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯ ಬುರ್ಕಾಪಾಲ್ ಪ್ರದೇಶದಲ್ಲಿ ಮಾವೋವಾದಿ ಬಂಡುಕೋರರಿಂದ 25 ಸಿಆರ್‌ಪಿಎಫ್ ಯೋಧರ ಮಾರಣಹೋಮ ನಡೆದ ಸ್ಥಳದಲ್ಲಿ ನಕ್ಸಲ್‌ನೋರ್ವನ ಶವ ಪತ್ತೆಯಾಗಿದೆ.

ಎ.24ರಂದು ಮಾವೋವಾದಿಗಳು ಮತ್ತು ಸಿಆರ್‌ಪಿಎಫ್ ಯೋಧರ ನಡುವೆ ಗುಂಡಿನ ಕಾಳಗ ನಡೆದಿದ್ದ ಸ್ಥಳದಿಂದ ಕೇವಲ 500 ಮೀ.ಅಂತರದಲ್ಲಿ ಅರಣ್ಯದಲ್ಲಿ ಗುರುವಾರ ರಾತ್ರಿ ನಕ್ಸಲ್ ಶವ ಪತ್ತೆಯಾಗಿದ್ದು, ಅದನ್ನಿನ್ನೂ ಗುರುತಿಸಬೇಕಾಗಿದೆ ಎಂದು ನಕ್ಸಲ್ ನಿಗ್ರಹ ಕಾರ್ಯಾಚರಣೆಗಳ ವಿಶೇಷ ಡಿಜಿಪಿ ಡಿ.ಎಂ.ಅವಸ್ಥಿ ಅವರು ಶುಕ್ರವಾರ ಸುದ್ದಿಸಂಸ್ಥೆಗೆ ತಿಳಿಸಿದರು.

ಯೋಧರ ಮಾರಣಹೋಮದ ಬಳಿಕ ಪ್ರದೇಶದಲ್ಲಿ ನಕ್ಸಲರ ಚಲನವಲನಗಳು ವರದಿಯಾದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ

ಸಿಆರ್‌ಪಿಎಫ್ ಯೋಧರೊಂದಿಗೆ ಗುಂಡಿನ ಕಾಳಗದಲ್ಲಿ ಹಲವಾರು ನಕ್ಸಲರೂ ಸಾವನ್ನಪ್ಪಿದ್ದು, ಬಂಡುಕೋರರು ಶವಗಳೊಂದಿಗೆ ಅರಣ್ಯದಲ್ಲಿ ಪರಾರಿಯಾಗಿದ್ದಾರೆ ಎಂಬ ವರದಿಗಳಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News