×
Ad

ವಾದ್ರಾರ ಹರ್ಯಾಣ ಭೂಹಗರಣ: ಕೇಜ್ರಿ ಆರೋಪ ನಿರಾಕರಿಸಿದ ಪ್ರಿಯಾಂಕ

Update: 2017-04-28 15:26 IST

ಹೊಸದಿಲ್ಲಿ,ಎ.28: ಹರಿಯಾಣದ ಫರೀದಾಬಾದ್‌ನಲ್ಲಿ ಕೃಷಿಭೂಮಿ ಪತಿರಾಬರ್ಟ್ ವಾದ್ರಾರ ಹಣದಿಂದ ಖರೀದಿಸಿಲ್ಲಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಹದಿನೈದು ಲಕ್ಷ ರೂಪಾಯಿ ಚೆಕ್ ನೀಡಿ ಫರೀದಾಬಾದ್‌ನಲ್ಲಿ ಐದು ಎಕರೆ ಕೃಷಿ ಭೂಮಿ ಖರೀದಿಸಿಲಾಗಿದೆ. ವಾದ್ರಾರ ಸ್ಕೈಲೈಟ್ ಹಾಸ್ಪಿಟಾಲಿಟಿ, ಡಿ.ಎಲ್.ಎಫ್‌ಗೂ ಈ ಹಣಕ್ಕೂ ಸಂಬಂಧವಿಲ್ಲ. 2010 ಫೆಬ್ರವರಿ 17ಕ್ಕೆ ಮಾರುಕಟ್ಟೆ ಬೆಲೆಯಾದ 80ಲಕ್ಷ ರೂಪಾಯಿಗೆ ಅದನ್ನು ಹಳೆಯ ಮಾಲಕರಿಗೆ ಮಾರಿ ಚೆಕ್ ಮೂಲಕ ಹಣ ಸ್ವೀಕರಿಸಲಾಗಿದ್ದು. ಅಜ್ಜಿ ಇಂದಿರಾಗಾಂಧಿಯವರಿಂದ ಸಿಕ್ಕಿದ ವಾರಸು ಆಸ್ತಿಯನ್ನು ಗುತ್ತೆಗೆ ಕೊಟ್ಟು ಅದರ ಮೊತ್ತದಲ್ಲಿ ಭೂಮಿ ಖರೀದಿಸಿದ್ದೆಂದು ಪ್ರಿಯಾಂಕಾ ಗಾಂಧಿಯವರ ಕಚೇರಿ ಹೇಳಿಕೆ ನೀಡಿದೆ.

ರಾಬರ್ಟ್‌ವಾದ್ರ ಬಡ್ಡಿರಹಿತವಾಗಿ ಡಿಎಲ್‌ಎಫ್ ಲಿಮಿಟೆಡ್‌ನಿಂದ 65 ಕೋಟಿರೂಪಾಯಿ ಸಾಲ ತೆಗೆದಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. ಈ ಹಣವನ್ನು ಪ್ರಿಯಾಂಕಾರಿಗೆ ಹರಿಯಾಣದಲ್ಲಿ ಭೂ ಖರೀದಿಸಲು ನೀಡಲಾಗಿದೆಯೆ ಎಂದು ಪತ್ರಕರ್ತರು ವಾದ್ರರನ್ನು ಪ್ರಶ್ನಿಸಿದ್ದರು.ಇದಕ್ಕೆ ಉತ್ತರವಾಗಿ ನಂತರ ಪ್ರಿಯಾಂಕಾರ ಕಚೇರಿ ಸ್ಪಷ್ಟೀಕರಣ ಹೇಳಿಕೆ ನೀಡಿದೆ. ಆರೋಪಗಳು ಆಧಾರರಹಿತ ಮಾತ್ರವಲ್ಲ ಮಾನಹಾನಿಕರವಾಗಿದೆ. ಪ್ರಿಯಾಂಕಾರ ಹೆಸರನ್ನು ಕಳಂಕಗೊಳಿಸಲು ಉದ್ದೇಶಪೂರ್ವಕ ರಾಜಕೀಯ ಪ್ರೇರಿತ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಪ್ರಿಯಾಂಕಾರ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News