×
Ad

ಜೆಇಇ ಮೈನ್ಸ್: ಆಳ್ವಾಸ್ ಪಿಯು ಕಾಲೇಜಿನ 632 ವಿದ್ಯಾರ್ಥಿಗಳು ಆಯ್ಕೆ

Update: 2017-04-28 18:18 IST

ಮೂಡುಬಿದಿರೆ, ಎ.28: ಎನ್‌ಐಟಿಗೆ ಪ್ರವೇಶ ನೀಡುವ ಜೆಇಇ ಮೈನ್ಸ್ ಅರ್ಹತಾ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 632 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಐಐಟಿ ಪ್ರವೇಶಕ್ಕೆ ಅಂತಿಮ ಪರೀಕ್ಷೆ ಜೆಇಇ ಅಡ್ವಾನ್ಸ್‌ಗೆ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ಒಂದೇ ಕಾಲೇಜಿನಿಂದ ಅತೀ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ದಾಖಲೆ ನಿರ್ಮಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ 486 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಈ ಪೈಕಿ ಶಿವಕುಮಾರ್ (210) ಅಂಕ ಗಳಿಸಿ ಕಾಲೇಜಿನಲ್ಲಿ ಟಾಪರ್ ಆಗಿ ಮೂಡಿ ಬಂದಿದ್ದಾರೆ. ಉಳಿದಂತೆ ಎಂ. ಚೇತನ್ (204), ಶಶಾಂಕ್ ಯು. (191) ರಾಮು ಕೆ. (188) ಮೃತ್ಯುಂಜಯ ರಾಜೇಂದ್ರ ಕಲ್ಯಾಣಿ (176) ಸೌಮ್ಯ ಶಶಿಧರ ಕಟ್ಟಿಮನಿ (168) ಮೇಘನಾ ಆರ್. (166) ವೈಭವ್ ಎನ್ .ಹೆಬ್ಬಾರ್ (165) ಶ್ರವಣ್ ವೈ ಆರ್. (163) ಜಿ.ಎಲ್. ರಕ್ಷಿತ್ (154) ಸಂದೀಪ್ ಮಹಂತೇಶಯ್ಯ ಪೂಜಾರ್ (153), ವಿಕಾಸ್ ಜಿ.ಎಸ್. (149) ರಹಸ್ಯ ಬಾರ್ಕೂರ್ (149) ಚಿರಂತ್ ಗೌಡ (146) ಅಂಕ ಗಳಿಸಿ ಗಮನಾರ್ಹ ಸಾಧನೆ ಮೆರೆದಿದ್ದಾರೆ.

ಕೆಟಗರಿ ವಿಭಾಬಾಗದಲ್ಲಿ ಪ್ರತೀಕ್ ದೇವೇಂದ್ರಪ್ಪ ಪೂಜಾರ್, ನಿತಿನ್ ಬಿ.,  ವಿಷ್ಣು ಪ್ರಸಾದ್, ರಂಜಿತ್ ಕೆ., ಪ್ರೀತವ್ ಎಂ. ಆರ್., ನಾಗರಾಜ್ ಎಸ್.ಜಿ., ಎಂ. ಚೇತನ್, ಸಾಗರ್ ಕಾಟರಕಿ, ರವಿಕಿರಣ್ ರುದ್ರಪ್ಪ ತಳವಾರ್, ಕಿರಣ್ ಎಲ್. ಉತ್ತಮ ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ ಎಂದು ಮೋಹನ ಆಳ್ವ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News