ಆತೂರು: ಓಮ್ನಿ ಢಿಕ್ಕಿ; ಪಾದಚಾರಿ ಮಹಿಳೆ ಮೃತ್ಯು
Update: 2017-04-28 18:28 IST
ಕಡಬ, ಎ.28. ಉಪ್ಪಿನಂಗಡಿ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಅತೂರು ಎಂಬಲ್ಲಿ ಓಮ್ನಿಯೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮೃತರನ್ನು ರಾಮಕುಂಜ ಗ್ರಾಮದ ಕುದ್ಕೋಳಿ ನಿವಾಸಿ ಚಂದ್ರಾವತಿ (45) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.