×
Ad

​ಎ.29: ನೂತನ ಮದ್ರಸ ಕಟ್ಟಡ ಉದ್ಘಾಟನೆ, ಸೌಹಾರ್ದ ಸಂಗಮ

Update: 2017-04-28 19:40 IST

ಉಪ್ಪಿನಂಗಡಿ, ಎ.28: ಬಾಖಿಯಾತು ಸ್ವಾಲಿಹಾತ್ ಜುಮಾ ಮಸೀದಿ ಮತ್ತು ಎಸ್ಸೆಸ್ಸೆಫ್ ಉರುವಾಲು ಪದವು ಶಾಖೆ ಇದರ ಜಂಟಿ ಆಶ್ರಯದಲ್ಲಿ ನೂತನ ಮದ್ರಸ ಕಟ್ಟಡ, ಎಸ್ಸೆಸ್ಸೆಫ್ ನೂತನ ಕಚೇರಿಯ ಉದ್ಘಾಟನಾ ಸಮಾರಂಭವು ಎ.29ರಂದು ನಡೆಯಲಿದೆ.

ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ನೇತೃತ್ವ ನೀಡಲಿದ್ದಾರೆ. ಉರುವಾಲುಪದವು ಬಿಜೆಎಂ ಖತೀಬ್ ಡಿ.ಎಂ.ಅಬ್ದುರ್ರಹ್ಮಾನ್ ಸಖಾಫಿ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಕಾವಲ್‌ಕಟ್ಟೆ ಅಲ್ ಖಾದಿಸ ಇದರ ಪ್ರಾಂಶುಪಾಲರಾದ ಹಾಫಿಳ್ ಸುಫಿಯಾನ್ ಸಖಾಫಿ ಸಂದೇಶ ಭಾಷಣ ಮಾಡಲಿದ್ದಾರೆ.

ರಾತ್ರಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಅಸ್ಸೈಯದ್ ಅಲವಿ ಜಲಾಲುದ್ದೀನ್ ತಂಙಳ್ ದುವಾಶೀರ್ವಚನ ನೀಡಲಿದ್ದಾರೆ. ನೌಫಲ್ ಸಖಾಫಿ ಕಳಸ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News