ಪೆಲೆಟ್ ಗನ್ ಬಳಕೆ: ಅಭಿಪ್ರಾಯ ಸಂಗ್ರಹಿಸಲು ಸುಪ್ರೀಂ ಸೂಚನೆ
Update: 2017-04-28 20:15 IST
ಹೊಸದಿಲ್ಲಿ, ಎ.28: ರಾಜ್ಯದಲ್ಲಿ ಪೆಲೆಟ್ ಗನ್‌ಗಳ ಬಳಕೆ ಕುರಿತಂತೆ ವಿವಿಧ ಗುಂಪಿನ ಅಭಿಪ್ರಾಯ ಸಂಗ್ರಹಿಸುವಂತೆ ಜಮ್ಮು-ಕಾಶ್ಮೀರ ಹೈಕೋರ್ಟ್ ವಕೀಲರ ಸಂಘಕ್ಕೆ ಸೂಚಿಸಿದೆ. ರಾಜ್ಯದಲ್ಲಿ ಭದ್ರತಾ ಪಡೆಗಳು ಪೆಲೆಟ್ ಗನ್‌ಗಳನ್ನು ಬಳಸುತ್ತಿರುವುದರ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಸೂಚನೆ ನೀಡಿದೆ.
ಅಲ್ಲದೆ ರಾಜ್ಯದಲ್ಲಿ ಪ್ರಸಕ್ತ ತಲೆದೋರಿರುವ ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರಕಾರದೊಡನೆ ಮಾತುಕತೆ ನಡೆಸಬಹುದಾದ ಮುಖಂಡರ ಹೆಸರನ್ನು ಸೂಚಿಸುವಂತೆಯೂ ಸುಪ್ರೀಂಕೋರ್ಟ್ ತಿಳಿಸಿದೆ.
ರಾಜ್ಯದಲ್ಲಿ ಪೆಲೆಟ್ ಗನ್‌ಗಳ ಬಳಕೆ ನಿಷೇಧಿಸಿದರೆ ಕಲ್ಲೆಸೆತ ಪ್ರಕರಣ ಅಂತ್ಯಗೊಳ್ಳುತ್ತದೆ ಎಂದು ಜಮ್ಮು-ಕಾಶ್ಮೀರ ಹೈಕೋರ್ಟ್ ವಕೀಲರ ಸಂಘ ಈ ಮೊದಲು ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು . ಅಲ್ಲದೆ ರಾಜ್ಯದಲ್ಲಿ ಪೆಲೆಟ್ ಗನ್‌ಗಳ ದುರ್ಬಳ ೆ ಯಾಗುತ್ತಿದೆ ಎಂದು ಆರೋಪಿಸಿತ್ತು.