×
Ad

ಲಂಡನ್‌ನಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ : ಮಹಿಳೆಗೆ ಗುಂಡು ; 4 ಬಂಧನ

Update: 2017-04-28 20:21 IST

ಲಂಡನ್, ಎ. 28: ಗುರುವಾರ ನಡೆದ ಭಯೋತ್ಪಾದನೆ ನಿಗ್ರಹ ತನಿಖೆಯ ವೇಳೆ ಲಂಡನ್ ಮತ್ತು ಸಮೀಪದ ಕೆಂಟ್‌ನಲ್ಲಿ ಪೊಲೀಸರು ಓರ್ವ ಮಹಿಳೆಗೆ ಗುಂಡು ಹಾರಿಸಿದರು ಮತ್ತು ಇತರ ನಾಲ್ವರನ್ನು ಬಂಧಿಸಿದರು ಎಂದು ಬ್ರಿಟಿಶ್ ಪೊಲೀಸರು ಹೇಳಿದ್ದಾರೆ.

ಭಯೋತ್ಪಾದಕ ಕೃತ್ಯಗಳನ್ನು ರೂಪಿಸಿರುವ, ಸಿದ್ಧತೆ ನಡೆಸಿರುವ ಮತ್ತು ಪ್ರಚೋದನೆ ನೀಡಿರುವ ಸಂಶಯದಲ್ಲಿ ಈ ನಾಲ್ವರನ್ನು ಬಂಧಿಸಲಾಗಿದೆ ಎಂದು ಮೆಟ್ರೊಪಾಲಿಟನ್ ಪೊಲೀಸರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಗುಂಡು ತಗಲಿರುವ ಮಹಿಳೆಯ ಸ್ಥಿತಿ ಗಂಭೀರವಾಗಿದೆಯಾದರೂ, ಸ್ಥಿರವಾಗಿದೆ ಎಂದು ಹೇಳಿಕೆ ತಿಳಿಸಿದೆ. ಮಹಿಳೆಯನ್ನು ಈವರೆಗೆ ಬಂಧಿಸಲಾಗಿಲ್ಲ. ಆಕೆ ಆಸ್ಪತ್ರೆಯಲ್ಲಿ ಪೊಲೀಸ್ ಕಾವಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಈ ಐವರ ಹೆಸರುಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಗುಪ್ತಚರ ಮಾಹಿತಿಯ ಆಧಾರದಲ್ಲಿ ಈ ಐವರ ಮೇಲೆ ನಿಗಾ ಇರಿಸಲಾಗಿತ್ತು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News