×
Ad

‘ಮ್ಯಾಂಗಲೂರ್ ಸೆಂಟರ್ ಫಾರ್ ಗ್ಯಾಸ್ಟ್ರೊಎಂಟರಾಲಜಿ’ ಶುಭಾರಂಭ

Update: 2017-04-28 20:23 IST

ಮಂಗಳೂರು, ಎ. 28: ನಗರದ ಫಳ್ನೀರ್ ರಸ್ತೆಯ ಫಳ್ನೀರ್ ಹೆಲ್ತ್ ಸೆಂಟರ್‌ನ 4ನೆ ಅಂತಸ್ತಿನಲ್ಲಿ ನೂತನ ‘ಮ್ಯಾಂಗಲೂರ್ ಸೆಂಟರ್ ಫಾರ್ ಗ್ಯಾಸ್ಟ್ರೊಎಂಟರಾಲಜಿ’ ಉದ್ಘಾಟನೆಗೊಂಡಿತು.

ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಪತಿ ವೈ.ಅಬ್ದುಲ್ಲಾ ಕುಂಞಿ ಉದ್ಘಾಟನೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ನಗರದ ಕೆಎಂಸಿಯ ಗ್ಯಾಸ್ಟ್ರೊಎಂಟರಾಲಜಿ ವಿಭಾಗದ ಎಚ್‌ಒಡಿ ಡಾ.ಬಿ.ವಿ.ತಂತ್ರಿ, ಇಂಡಿಯಾನ ಹಾಸ್ಪಿಟಲ್ ಆ್ಯಂಡ್ ಹಾರ್ಟ್ ಇನ್ಸ್‌ಟಿಟ್ಯೂಟ್‌ನ ನಿರ್ದೇಶಕ ಡಾ.ಯೂಸುಫ್ ಕುಂಬ್ಳೆ, ಯೆನೆಪೊಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ನಿರ್ದೇಶಕ ಡಾ.ಮುಹಮ್ಮದ್ ತಾಹಿರ್, ಹಿರಿಯ ವೈದ್ಯರಾದ ಮುಹಮ್ಮದ್ ಇಸ್ಮಾಯೀಲ್ ಎಚ್., ಅಬ್ದುಲ್ ಮಜೀದ್, ಹೃದ್ರೋಗ ತಜ್ಞ ಡಾ.ಸೈಯದ್ ಮುಹಮ್ಮದ್ ಕೆ. ಉಪಸ್ಥಿತರಿದ್ದರು.

ಇದನ್ನೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಅಸ್ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ದುಆ ನೆರವೇರಿಸಿ, ಆಶೀರ್ವಚನ ನೀಡಿದರು. ಅತಿಥಿಗಳಾಗಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್, ಪೋಸೋಟು ಮುದರ್ರಿಸ್ ಅಸ್ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್, ನೀಲೇಶ್ವರಂ ಇ.ಕೆ.ಮಹ್ಮೂದ್ ಮೌಲವಿ, ಕುಂಬ್ಲ ಇಮಾಂ ಶಾಫಿ ಇಸ್ಲಾಮಿಕ್ ಅಕಾಡಮಿಯ ಅಧ್ಯಕ್ಷ ಎಂ.ಎ.ಖಾಸಿಂ ಮುಸ್ಲಿಯಾರ್, ಉಡುಪಿ ಅತ್ರಾಡಿಯ ಖಾಝಿ ವಿ.ಕೆ.ಅಬೂಬಕರ್ ಮುಸ್ಲಿಯಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News