×
Ad

ರಿಕ್ಷಾ ನಿಲ್ದಾಣದ ಗೇಟ್‌ ಉದ್ಘಾಟನೆ.

Update: 2017-04-28 21:05 IST

ಮಂಗಳೂರು, ಎ. 28 : ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ನಿರ್ಮಾಣಗೊಂಡ ಸೂರಜ್ ರಿಕ್ಷಾ ನಿಲ್ದಾಣ ಗೇಟ್ ದ್ವಾರವನ್ನು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಿಕ್ಷಾ ಚಾಲಕರು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ರವಾನಿಸಬೇಕು. ಪ್ರಯಾಣಿಕರಲ್ಲಿ ಸೌಜನ್ಯವನ್ನು ಮತ್ತು ಹಿರಿಯ ಪ್ರಯಾಣಿಕರಿಗೆ ಸಹಾಯವನ್ನು ಮಾಡುವ ಮುಖಾಂತರ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದು ರಿಕ್ಷಾ ಚಾಲಕರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಸೂರಜ್ ಪಾರ್ಕ್ ರಿಕ್ಷಾ ಚಾಲಕರ ಅಧ್ಯಕ್ಷ ಹಿರಿಯ ಚಾಲಕ ವಸಂತ ಶೆಟ್ಟಿ, ಶೇಖರ್ ದೇರಲಕಟ್ಟೆ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News