ಎ.29, 30: ತೋಡಾರು ಶಂಸುಲ್ ಉಲಮಾ ಕಾಲೇಜಿನ 7ನೆ ವಾರ್ಷಿಕೋತ್ಸವ
Update: 2017-04-28 22:31 IST
ಮಂಗಳೂರು, ಎ. 28: ತೋಡಾರು ಶಂಸುಲ್ ಉಲಮಾ ಕಾಲೇಜಿನ 7ನೆ ವಾರ್ಷಿಕೋತ್ಸವ ಸಮಾರಂಭವು ಎ.29 ಮತ್ತು 30ರಂದು ನಡೆಯಲಿದೆ.
29ರಂದು ತೋಡಾರಿನ ಶಂಸುಲ್ ಉಲಮಾನಗರದಲ್ಲಿ ಮಗ್ರಿಬ್ ನಮಾಝಿನ ಬಳಿಕ ನಡೆಯುವ ದ್ಸಿಕ್ರ್ ಮಜ್ಲಿಸ್‌ನ ನೇತೃತ್ವವನ್ನು ಸೈಯದ್ ಅಲಿ ತಂಙಳ್ ಕುಂಬೋಳ್ ವಹಿಸಲಿದ್ದಾರೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಶೈಖುಲ್ ಜಾಮಿಅ ಆಲಿಕುಟ್ಟಿ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. 30ರಂದು ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ತೋಡಾರು ಶಂಸುಲ್ ಉಲಮಾ ಅರೇಬಿಕ್ ಕಾಲೇಜಿನ ಅಧ್ಯಕ್ಷ ಸೈಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ವಹಿಸಲಿದ್ದಾರೆ. ಕಾಲೇಜಿನ ಸಲಹಾ ಸಮಿತಿಯ ಅಧ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ.
ಕಾರ್ಯಾಧ್ಯಕ್ಷ ಕೆ.ಎಂ.ಉಸ್ಮಾನುಲ್ ಫೈಝಿ, ಅಜ್ಮೀರ್ ತಂಙಳ್ ಅಸ್ಸೈಯದ್ ಅಬೂಹಸನ್ ಮುಹಿಬ್ಬುಲ್ಲಾಹಿ ಪೋಕೋಯ ತಂಙಳ್ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.