×
Ad

ಮನಪಾ: ನಾಮನಿರ್ದೇಶಿತ ಕಾರ್ಪೊರೇಟರ್‌ಗಳ ಸದಸ್ಯತ್ವ ರದ್ದು

Update: 2017-04-28 23:44 IST

ಮಂಗಳೂರು, ಎ.28: ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ತಕ್ಷಣ ಜಾರಿಗೆ ಬರುವಂತೆ ಇಬ್ಬರು ನಾಮನಿರ್ದೇಶಿತ ಕಾರ್ಪೊರೇಟರ್‌ಗಳ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ.

ಮಮತಾ ಶೆಣೈ ಮತ್ತು ಪ್ರೇಮನಾಥರ ಸದಸ್ಯತ್ವವನ್ನು ರದ್ದುಗೊಳಿಸಿ ಸರಕಾರ ಆದೇಶಿಸಿದ್ದು, ರಾಮದಾಸ ಪ್ರಭು ಮತ್ತು ದಿನೇಶ್ ಪಿ.ಎಸ್. ಅವರನ್ನು ನೇಮಿಸಿ ಆದೇಶ ನೀಡಿದೆ.

 ಕವಿತಾ ಸನಿಲ್ ಅವರು ಮೇಯರ್ ಆಗಿ ಆಯ್ಕೆಯಾದ ಬಳಿಕ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ನಾಗವೇಣಿ ತನ್ನ ಸಮಿತಿಗೆ ಸಂಬಂಧಿಸಿದ ಕಾರ್ಯಕ್ರಮವೊಂದರ ಬಗೆಗಿನ ಅಸಮಾಧಾನದಿಂದ ಪಾಲಿಕೆಯ ಸಭೆಯಲ್ಲಿ ಧರಣಿ ಕುಳಿತುಕೊಂಡಿದ್ದರು. ದಲಿತ ಸಮುದಾಯಕ್ಕೆ ಸೇರಿರುವ ನಾಗವೇಣಿಗೆ ಅದೇ ಸಮುದಾಯದ ಪ್ರೇಮನಾಥ ಹಾಗೂ ನಾಗವೇಣಿಯವರ ಸ್ನೇಹಿತೆ ಎನ್ನಲಾಗಿರುವ ಮಮತಾ ಶೆಣೈ ಬೆಂಬಲ ಸೂಚಿಸಿದ್ದರು. ಇದೇ ಕಾರಣದಿಂದ ಇವರಿಬ್ಬರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News