×
Ad

​19 ಜೋಡಿಗೆ ಸಾಮೂಹಿಕ ವಿವಾಹ

Update: 2017-04-28 23:48 IST

ಮಂಗಳೂರು, ಎ. 28: ಸಂತ ವಿನ್ಸೆಂಟ್ ದೆ ಪೌಲ್ ಸೊಸೈಟಿ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಸಾಮೂಹಿಕ ವಿವಾಹ ಕಾರ್ಯಕ್ರಮವು ಮೇ 1ರಂದು ನಗರದ ಹೋಲಿ ರೋಜರಿ ಕಾತೆದ್ರಾಲ್ ಚರ್ಚ್‌ನಲ್ಲಿ ನಡೆಯಲಿದೆ.

ಮಂಗಳೂರು ಬಿಷಪ್ ರೆ.ಡಾ. ಅಲೋಶಿಯಸ್ ಪೌಲ್ ಡಿಸೋಜ ನೇತೃತ್ವ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಹಕಾರಿ ಸಂಘ ವಲಯದ ಮುತ್ಸದಿ ಡಾ.ಜೋನ್ ಡಿಸಿಲ್ವಾ ಭಾಗವಹಿಸಲಿದ್ದಾರೆ. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಈ ತನಕ ಒಂದು ಸಾವಿರಕ್ಕಿಂತಲೂ ಹೆಚ್ಚಿನ ಜೋಡಿಗಳು ಪಾಲ್ಗೊಂಡಿವೆ. ಈ ವರ್ಷ ನಡೆಯುವ ಸಂಭ್ರಮದಲ್ಲಿ 19 ಯುವ ಜೋಡಿಗಳು ಮಂಗಳೂರು, ಉಡುಪಿ ವಲಯ ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ಭಾಗವಹಿಸಲಿವೆ. ಸುಮಾರು 2,000 ಮಂದಿ ಅತಿಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಪ್ರಕಟನೆ ತಿಳಿಸಿದೆ.

ಪ್ರತಿ ಜೋಡಿಗೆ ಮದುವೆಯ ಸಂದರ್ಭ ಉಂಗುರ ಸೀರೆ, ಪ್ಯಾಂಟ್ ಹಾಗೂ ಗೃಹಪಯೋಗಿ ವಸ್ತುಗಳನ್ನು ನೀಡಲಾಗುವುದು. ಪ್ರತಿ ಜೋಡಿಗೆ 65 ಸಾವಿರ ರೂ. ಖರ್ಚು ತಗಲಲಿದೆ ಎಂದು ಅಂದಾಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News