ಮಾಸ್ಕೋದಲ್ಲಿ ಬಂಗಾರ ಗೆದ್ದ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್
Update: 2017-04-29 11:08 IST
ಹೊಸದಿಲ್ಲಿ,ಎ.29: ಅಂತಾರಾಷ್ಟ್ರೀಯ ಖ್ಯಾತಿಯ ಮರಳು ಶಿಲ್ಪಿ, ಒಡಿಶಾದ ಸುದರ್ಶನ ಪಟ್ನಾಯಕ್ 10ನೆ ಆವೃತ್ತಿಯ ಮಾಸ್ಕೊ ಸ್ಯಾಂಡ್ ಆರ್ಟ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
ರಶ್ಯದ ಮಾಸ್ಕೋದಲ್ಲಿ ಎ.22 ರಿಂದ 28ರ ತನಕ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ‘ವರ್ಲ್ಡ್ ಅರೌಂಡ್ ಅಸ್’ಎನ್ನುವುದು ಸ್ಪರ್ಧೆಯ ವಿಷಯವಾಗಿತ್ತು. ಸ್ಪರ್ಧೆಯಲ್ಲಿ ವಿವಿಧ ದೇಶದ 25 ಕಲಾಕಾರರು ಭಾಗವಹಿಸಿದ್ದು, ಪಟ್ನಾಯಕ್ ಭಾರತವನ್ನು ಪ್ರತಿನಿಧಿಸಿದ್ದರು.
ರಶ್ಯದಲ್ಲಿರುವ ಭಾರತ ರಾಯಭಾರಿ ಪಂಕಜ್ ಸರಾನ್ ಅವರು ಸುದರ್ಶನ್‌ಗೆ ಕರೆ ಮಾಡಿ ಪದಕವನ್ನು ಗೆದ್ದುಕೊಂಡಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಪಟ್ನಾಯಕ್ ಕಳೆದ ವರ್ಷ ಮಾಸ್ಕೋದಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು. ಇತ್ತೀಚೆಗೆ ಒಡಿಶಾದ ಪುರಿ ಬೀಚ್‌ನಲ್ಲಿ ವಿಶ್ವದಲ್ಲೇ ಅತ್ಯಂತ ಎತ್ತದ ಮರಳಿನ ಕೋಟೆಯನ್ನು ನಿರ್ಮಿಸಿದ್ದ ಪಟ್ನಾಯಕ್ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದರು.