×
Ad

ಮೇ.1-7: ಯುವಜನ ರಾಷ್ಟ್ರೀಯ ಐಕ್ಯತಾ ಶಿಬಿರ

Update: 2017-04-29 16:40 IST

ಮಂಗಳೂರು, ಎ.29: ರಾಷ್ಟ್ರೀಯ ಯುವಜನ ಯೋಜನೆ ಮತ್ತು ಯುವಜನ ವ್ಯವಹಾರಗಳ ಸಚಿವಾಲಯ ಹಾಗೂ ಯೆನೆಪೊಯ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ "ಯುವಜನ ರಾಷ್ಟ್ರೀಯ ಐಕ್ಯತಾ ಶಿಬಿರ- 2017" ದೇರಳಕಟ್ಟೆ ಯೆನೆಪೊಯ ವಿಶ್ವವಿದ್ಯಾನಿಲಯದ ಯೆಂಡ್ಯೂರೆನ್ಸ್ ರೆನ್‌ನಲ್ಲಿ ನಡೆಯಲಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎನ್ನೆಸ್ಸೆಸ್ ಸಂಯೋಜಕಿ ಡಾ,ಅಶ್ವಿನಿ ಶೆಟ್ಟಿ, ನಾಯಕತ್ವ ಕೌಶಲ್ಯಗಳು, ಆರೋಗ್ಯ ಜಾಗೃತಿ, ಪ್ರಥಮ ಚಿಕಿತ್ಸೆ ತರಬೇತಿ, ದುರಂತ ನಿರ್ವಹಣೆ ಮತ್ತು ರಕ್ಷಣಾ ಕಾರ್ಯಾಚರಣೆ, ದೇಶ ನಿರ್ಮಾಣದಲ್ಲಿ ಯುವಜನರ ಪಾತ್ರ, ಮಹಿಳಾ ಸಬಲೀಕರಣ, ಪರಿಸರ ರಕ್ಷಣೆ ಹಾಗೂ ಐತಿಹಾಸಿಕ ಸ್ಮಾರಕ ರಕ್ಷಣೆ ಮುಂತಾದ ವಿಷಯಗಳ ಮೇಲೆ ಜಾಗೃತಿ ಕಾರ್ಯಕ್ರಮಗಳು ಶಿಬಿರದಲ್ಲಿ ನಡೆಯಲಿದೆ. ದೇಶದ ವಿವಿಧ ಭಾಗಗಳ ಸುಮಾರು 500 ಎನ್ನೆಸ್ಸೆಸ್ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಲಿದ್ದಾರೆ ಎಂದರು

ಶಿಬಿರದ ಅಂಗವಾಗಿ ಶ್ರಮದಾನಗಳು, ಸ್ಚಚ್ಚತಾ ಅಭಿಯಾನ, ಸರಕಾರಿ ಶಾಲಾ ಕಟ್ಟಡಗಳಿಗೆ ಬಣ್ಣ ಬಳಿಯುವುದು ಹಾಗೂ ರಸ್ತೆ ನಿರ್ಮಾಣ ಕಾರ್ಯ ನಡೆಯಲಿದೆ. ಅಲ್ಲದೆ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಐತಿಹಾಸಿಕ ಸ್ಥಳಗಳಿಗೆ ಭೇಟಿ ಮೊದಲಾದವುಗಳು ನಡೆಯಲಿದೆ. ಶಿಬಿರವನ್ನು ಮೇ 2ರಂದು ಬೆಳಗ್ಗೆ 10:30ಕ್ಕೆ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದು, ಎನ್ನೆಸ್ಸೆಸ್ ನಿರ್ದೇಶಕ ಡಾಎಸ್.ಎನ್ ಸುಬ್ಬರಾವ್ ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ನಿಟ್ಟೆ ವಿಶ್ವವಿದ್ಯಾನಿಲಯದ ಚಾನ್ಸಲರ್ ಡಾ.ವಿನಯ್ ಹೆಗ್ಡೆ ಮುಖ್ಯ ಭಾಷಣ ಮಾಡಲಿದ್ದಾರೆ. ಮೇ 7ರಂದು ಮಧ್ಯಾಹ್ನ 2:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತೆ ಸುಹಾಸಿನಿ ದಾಮೋದರ್, ಅನಿಲ್ ಹೆಬ್ಬಾರ್, ಪಿಆರ್‌ಒ ಸಬಿತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News