×
Ad

ನೀರಿಗೆ ಬಿದ್ದು ವ್ಯಕ್ತಿ ಮೃತ್ಯು

Update: 2017-04-29 20:48 IST

ಕಡಬ, ಎ.29. ಠಾಣಾ ವ್ಯಾಪ್ತಿಯ ಹೊಸ್ಮಠ ಸಮೀಪದ ಉಳಿಪ್ಪು ಎಂಬಲ್ಲಿ ಕುಮಾರಧಾರಾ ನದಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಶನಿವಾರದಂದು ನಡೆದಿದೆ. ಮೃತರನ್ನು ಮೂಲತಃ ಬೆಳ್ಳಾರೆ ನಿವಾಸಿ ಮತ್ತಡ(45) ಎಂದು ಗುರುತಿಸಲಾಗಿದ್ದು. ಮತ್ತಡರವರು ಅವಿವಾಹಿತರಾಗಿದ್ದು ಸುಮಾರು 25 ವರ್ಷಗಳಿಂದ ಹೊಸ್ಮಠ ವ್ಯಾಪ್ತಿಯಲ್ಲಿ ವಾಸ್ತವ್ಯ ಹೂಡಿದ್ದ ಅವರು ಕುಮಾರಧಾರಾ ನದಿ ಸಮೀಪದಲ್ಲಿ ಮಲಗುತ್ತಿದ್ದರು. ಮೀನು ಹಿಡಿಯುವುದು, ಜೇನು ತೆಗೆಯುವ ಕೆಲಸ ನಿರ್ವಹಿಸುತ್ತಿದ್ದ ಇವರು ಕಾಲುಜಾರಿ ಬಿದ್ದು ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News