×
Ad

ಮೂಡುಬಿದಿರೆ ಪ್ರೆಸ್‌ಕ್ಲಬ್ ಅಧ್ಯಕ್ಷರಾಗಿ ಬಿ.ಸೀತಾರಾಮ ಆಚಾರ್ಯ ಆಯ್ಕೆ

Update: 2017-04-29 22:37 IST

ಮೂಡುಬಿದಿರೆ: ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದಿರೆ ಪ್ರೆಸ್‌ಕ್ಲಬ್(ರಿ.)2017-18ನೇ ಸಾಲಿನ ನೂತನ ಅಧ್ಯಕ್ಷರಾಗಿ ಬಿ.ಸೀತಾರಾಮ ಆಚಾರ್ಯ ಹಾಗೂ ಕಾರ್ಯದರ್ಶಿಯಾಗಿ ನವೀನ್ ಸಾಲ್ಯಾನ್ ಆಯ್ಕೆಯಾಗಿದ್ದಾರೆ.

ಸಂಘದ ನಿರ್ಗಮನ ಅಧ್ಯಕ್ಷ ಧನಂಜಯ ಮೂಡುಬಿದಿರೆ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಪ್ರೇಮಶ್ರೀ ಕಲ್ಲಬೆಟ್ಟು (ಉಪಾಧ್ಯಕ್ಷೆ), ಎಂ.ಗಣೇಶ್ ಕಾಮತ್(ಕೋಶಾಧಿಕಾರಿ) ಹ್ಯಾರಿಸ್ ಹೊಸ್ಮಾರ್ (ಸಂಘಟನಾ ಕಾರ್ಯದರ್ಶಿ), ಸಂಘದ ಕಾರ್ಯಕರಿಣಿ ಸಮಿತಿ ಸದಸ್ಯರಾಗಿ ಬಿ.ಕೆ ಅಶ್ರಪ್, ಪ್ರಸನ್ನ ಹೆಗ್ಡೆ, ಧನಂಜಯ ಮೂಡುಬಿದಿರೆ, ಯಶೋಧರ ಬಂಗೇರ, ರಾಘವೇಂದ್ರ ಶೆಟ್ಟಿ, ಜೈಸನ್ ತಾಕೋಡೆ, ಶರತ್ ದೇವಾಡಿಗ, ಕೆ.ಪದ್ಮಶ್ರೀ ಭಟ್ ನಿಡ್ಡೋಡಿ, ಲವೀನಾ ತಾಕೋಡೆ ಆಯ್ಕೆಯಾಗಿದ್ದಾರೆ.

ಬಿ.ಕೆ ಅಶ್ರಫ್ ವಾಲ್ಪಾಡಿ ವರ್ಷದ ಕ್ರೀಯಾಶೀಲ ಪತ್ರಕರ್ತ ಗೌರವಕ್ಕೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News