ಏಕಕಾಲದಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ನಡೆಸಲು ನೀತಿ ಆಯೋಗದ ಒಲವು

Update: 2017-04-30 11:55 GMT

ಹೊಸದಿಲ್ಲಿ,ಎ.30: ಪ್ರಚಾರ ಅಭಿಯಾನಗಳಿಂದಾಗಿ ಆಡಳಿತ ವ್ಯತ್ಯಯವನ್ನು ಕನಿಷ್ಠಗೊಳಿಸಲು 2024ನೇ ಸಾಲಿನಿಂದ ಏಕಕಾಲದಲ್ಲಿ ಎರಡು ಹಂತಗಳಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ನಡೆಸುವಂತೆ ನೀತಿ ಆಯೋಗವು ಸಲಹೆ ನೀಡಿದೆ.

 ತನ್ನ ಪ್ರಸ್ತಾವದ ಅನುಷ್ಠಾನಕ್ಕಾಗಿ ಗರಿಷ್ಠ ಒಂದು ಬಾರಿ ಕೆಲವು ರಾಜ್ಯ ವಿಧಾನಸಭೆಗಳ ಅಧಿಕಾರಾವಧಿಯನ್ನು ಮೊಟಕುಗೊಳಿಸುವ ಅಥವಾ ವಿಸ್ತರಿಸುವುದು ಅಗತ್ಯವಾಗುತ್ತದೆ ಎಂದು ಅದು ಹೇಳಿದೆ.

ಈ ಸಲಹೆಯನ್ನು ಪರಿಶೀಲಿಸಲು ಚುನಾವಣಾ ಆಯೋಗವನ್ನು ನೋಡಲ್ ಏಜೆನ್ಸಿಯನ್ನಾಗಿ ಮಾಡಿರುವ ಆಯೋಗವು, ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಲು ಅಗತ್ಯ ಮಾರ್ಗಸೂಚಿಯನ್ನು ನಿರ್ಧರಿಸಲು ಸಂಬಂಧಿಸಿದವರನ್ನೊಳಗೊಂಡ ಕಾರ್ಯ ಸಮಿತಿಯೊಂದರ ರಚನೆಗೆ ಶಿಫಾರಸು ಮಾಡಿದೆ.

2017-18ನೇ ಸಾಲಿನಿಂದ 2019-20ರವರೆಗೆ ಮೂರು ವರ್ಷಗಳ ಕರಡು ಕ್ರಿಯಾ ಕಾರ್ಯಸೂಚಿಯಂತೆ ಈ ಸಂಬಂಧ ವರದಿಯೊಂದನ್ನು ಆರು ತಿಂಗಳಲ್ಲಿ ಅಂತಿಮಗೊಳಿಸುವ ಅಗತ್ಯವಿದೆ ಮತ್ತು ಅಂತಿಮ ನೀಲನಕ್ಷೆ ಮುಂದಿನ ಮಾರ್ಚ್‌ನೊಳಗೆ ಸಿದ್ಧಗೊಳ್ಳಲಿದೆ.

ಎ.23ರಂದು ನಡೆದಿದ್ದ ನೀತಿ ಆಯೋಗದ ಸಭೆಯಲ್ಲಿ ಕರಡು ವರದಿಯನ್ನು ಆಡಳಿಯ ಮಂಡಳಿ ಸದಸ್ಯರಿಗೆ ವಿತರಿಸಲಾಗಿತ್ತು.

 ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೂ ಒತ್ತು ನೀಡಿರುವ ಹಿನ್ನೆಲೆಯಲ್ಲಿ ನೀತಿ ಆಯೋಗದ ಸಲಹೆಯು ಮಹತ್ವ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News