ರಾತ್ರೊರಾತ್ರಿ ಅಕ್ರಮ ಕಾಮಗಾರಿಗೆ ಸಾಥ್ ನೀಡಿದ ಪುರಸಭೆ
ಕಾರ್ಕಳ,ಎ.30:ಪುರಸಭೆ ವ್ಯಾಪ್ತಿ ವೆಂಕಟರಮಣ ದೇವಸ್ಥಾನ ಶ್ರೇಷ್ಠ ಬೇಕರಿ ಬಳಿ ರಾತ್ರೋ ರಾತ್ರಿ ಅಕ್ರಮ ಚರಂಡಿ ಕಾಮಗಾರಿಗೆ ಮುಂದಾಗಿದ್ದ ವೇಳೆ ಸ್ಥಳಿಯರಿಂದ ಅಕ್ಷೇಪ ಮಾಡಿದ ಹಿನ್ನಲೆ ಯಲ್ಲಿ ಗುತ್ತಿಗೆ ದಾರ ಹಾಗೂ ಸ್ಥಳಿಯರ ನಡುವೆ ಮಾತಿನ ಚಕಮಕಿನಡೆದು ಪೊಲಿಸರು ಮಧ್ಯಪ್ರವೇಶಿಸಿ ಪ್ರಕರಣವನ್ನು ತಿಳಿಗೊಳಿಸಿದ ಘಟನೆ ಶನಿವಾರ ನಸುಕಿನ ವೇಳೆ ನಡೆದಿದೆ.
ಕಾರ್ಕಳ ಬಿಜೆಪಿ ನಗರ ಅಧ್ಯಕ್ಷ ಅನಂತ ಕೃಷ್ಣ ಶೆಣೈ ಎಂಬುವರಿಗೆ ಸಂಬಂದಿಸಿದ ಈ ಕಾಮಗಾರಿ ಯಾಗಿದೆ.ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ನಗರೋತ್ಥಾನ ಅಡಿಯಲ್ಲಿ ಕೆಲವು ಕಡೆಗಳಲ್ಲಿ ಚರಂಡಿ ಕಾಮಗಾರಿಗಳುನಡೆದಿದ್ದು ಇನ್ನು ಉಳಿದ ಪ್ರದೇಶಗಳಲ್ಲಿ ಕಾಮಗಾರಿ ಅಪೂರ್ಣಗೊಂಡಿದ್ದು ನಗರದ ಅಂದವನ್ನು ಕೆಡಸುತ್ತಿದೆ .
ಅದರೆ ಕೆಲವರು ಅಗಲಿಕರಣ ಸಂದರ್ಭದಲ್ಲಿ ರಸ್ತೆಗೆ ಜಾಗವನ್ನು ಬಿಟ್ಟುಕೊಡುವುದಾಗಿ ತಿಳಿಸಿ ಪುರಸಬೆಯನ್ನು ವಂಚಿಸಿ ಪರವಾನಿಗೆ ಪಡೆದು ರಸ್ತೆಯಲ್ಲೇ ಕಟ್ಟಡ ನಿರ್ಮಾಣವನ್ನು ಮಾಡಿದ್ದು ಈ ಎಲ್ಲಾ ಕಾರಣದಿಂದ ಅಭಿವೃದ್ಧಿ ಗೆ ಹಿನ್ನಡೆಯಾಗಿದೆ. ಕೆಲವರು ಸ್ವಯಂ ಪ್ರೇರಿತರಾಗಿ ಜಾಗವನ್ನು ಬಿಟ್ಟು ಕೊಟ್ಟಿದ್ದು ಇನ್ನು ಉಳಿದವರು ಬಿಟ್ಟು ಕೊಡದೇ ಹಾಗೆ ಬಿಟ್ಟಿರುವುದರಿಂದ ಈ ಚರಂಡಿ ಕಾಮಗಾರಿಗೆ ಹಿನ್ನಡೆಯಾಗಿದೆ.