×
Ad

ಯುನೈಟೆಡ್ ಸೋಶಿಯಲ್ ಮೂವ್‌ಮೆಂಟ್‌ನಿಂದ ಪಲ್ಸ್ ಪೋಲಿಯೋ

Update: 2017-04-30 18:04 IST

ಮಂಗಳೂರು, ಎ.30: ಉಳ್ಳಾಲ ಯುನೈಟೆಡ್ ಸೋಶಿಯಲ್ ಮೂವ್‌ಮೆಂಟ್‌ನ ಸಹಕಾರದೊಂದಿಗೆ ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರವಿವಾರ ನಡೆದ 2ನೆ ಹಂತದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರಶಾಂತ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಕಳೆದ ವರ್ಷ ಪೋಲಿಯೋ ಅಭಿಯಾನದ ಸಂದರ್ಭ ಕೆಲವೊಂದು ಅಡಚಣೆ ಬಂದಿತ್ತು. ಆದರೂ ಶೇ.95ರಷ್ಟು ಗುರಿ ಸಾಧಿಸಲಾಗಿದೆ. ಅಭಿಯಾನ ಸಂದರ್ಭ ಸರ್ವರೂ ಸಹಕಾರ ನೀಡಿದರೆ ಕೆಲಸ ಸುಲಲಿತವಾಗುತ್ತದೆ ಎಂದರು.

ಯುಎಸ್‌ಎಂ ಸಂಘಟಕ ಫಾರೂಕ್ ಉಳ್ಳಾಲ್, ಟ್ರಸ್ಟಿಗಳಾದ ಚಾರ್ಟಡ್ ಎಕೌಂಟೆಂಟ್ ಯು.ಎಚ್.ಅಹ್ಮದ್ ಬಾವ, ಬಿ.ಎಂ.ಬದ್ರುದ್ದೀನ್, ಯು.ಎನ್.ಬಾವ ಮಿಲ್ಲತ್‌ನಗರ, ಯು.ಕೆ.ಯೂಸುಫ್ ಉಳ್ಳಾಲ್, ರಹ್ಮತ್ ಬಸ್ತಿಪಡ್ಪು, ಇಬ್ರಾಹೀಂ ಮುಕ್ಕಚ್ಚೇರಿ, ಯು.ಬಿ. ಸಿದ್ದೀಕ್ ಬಸ್ತಿಪಡ್ಪು, ಕಬೀರ್ ಚಾಯಬ್ಬ, ಅಬ್ದುರ್ರಝಾಕ್ ಹರೇಕಳ, ಹಿರಿಯ ಆರೋಗ್ಯ ಸಹಾಯಕಿ ರಾಜಮ್ಮ ಉಪಸ್ಥಿತರಿದ್ದರು.

ಟ್ರಸ್ಟಿ ಹೈದರ್ ಹುಸೈನ್ ಮಾಸ್ತಿಕಟ್ಟೆ ಸ್ವಾಗತಿಸಿದರು. ಟ್ರಸ್ಟಿ ಅಹ್ಮದ್ ಬಾವ ಕೊಟ್ಟಾರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News