×
Ad

ರುಡ್‌ಸೆಟ್‌ನಲ್ಲಿ ಉಚಿತ ಸ್ಮಾರ್ಟ್‌ಪೋನ್ ರಿಪೇರಿ ತರಬೇತಿ

Update: 2017-04-30 19:03 IST

 ಉಡುಪಿ, ಎ.30: ಬ್ರಹ್ಮಾವರದಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನಗಳ ಸ್ಮಾರ್ಟ್‌ಪೋನ್ ರಿಪೇರಿ ಮತ್ತು ಸರ್ವಿಸ್‌ಗೆ ಉಚಿತ ತರಬೇತಿಯನ್ನು ಮೇ 20ರಿಂದ ಜೂನ್ 18ರವರೆಗೆ ಆಯೋಜಿಸಲಾಗಿದೆ.

  ಉಡುಪಿ, ಶಿವಮೊಗ್ಗ ಹಾಗೂ ಉತ್ತರಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ 18ರಿಂದ 45 ವರ್ಷ ವಯೋಮಿತಿಯೊಳಗಿನ ಸ್ವಉದ್ಯೋಗ ಮಾಡಲು ಆಸಕ್ತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ತರಬೇತಿಯಲ್ಲಿ ಸಂಬಂಧಪಟ್ಟ ವಿಷಯದ ಜೊತೆಗೆ ಉದ್ಯಮ ನಿರ್ವಹಣೆ ಹಾಗೂ ಬ್ಯಾಂಕಿನ ವ್ಯವಹಾರದ ಬಗ್ಗೆ ಸಹ ಮಾಹಿತಿ ನೀಡಲಾಗುವುದು.

ಈ ಸಂಸ್ಥೆಯಲ್ಲಿ ತರಬೇತಿಗಳು ಸಂಪೂರ್ಣ ಉಚಿತವಾಗಿದ್ದು, ವಸತಿ ಯುತವಾಗಿವೆ. ಆಸಕ್ತರು ಕೂಡಲೇ ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ವಯಸ್ಸು, ವಿದ್ಯಾರ್ಹತೆ ಅನುಭವಗಳ ವಿವರಗಳೊಂದಿಗೆ ತಕ್ಷಣ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ದೂರವಾಣಿ: 0820- 2563455, 9449862808ನ್ನು ಸಂಪರ್ಕಿಸುವಂತೆ ಅಥವಾ ವೆಬ್‌ಸೈಟ್ - www.rudsetitraining.org -ಗೆ ಭೇಟಿ ನೀಡುವಂತೆ ರುಡ್‌ಸೆಟ್ ಪ್ರಕಟಣೆ ತಿಳಿಸಿದೆ.

. ಅರ್ಜಿ ಸಲ್ಲಿಸಬೇಕಾದ ವಿಳಾಸ:ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, 52ನೇ ಹೇರೂರು, ಬ್ರಹ್ಮಾವರ-576213 ಉಡುಪಿ ಜಿಲ್ಲೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News