ಮೇ 1ರಂದು ‘ಚಾಲಕವಾಣಿ’ ಪತ್ರಿಕೆ ಬಿಡುಗಡೆ
Update: 2017-04-30 19:13 IST
ಮಂಗಳೂರು, ಎ. 30: ಆಟೊ ರಿಕ್ಷಾ ಸಹಿತ ಎಲ್ಲ ವರ್ಗದ ಚಾಲಕರ ಬದುಕು ಬವಣೆಗಳನ್ನು ಬಿಂಬಿಸುವ ‘ಚಾಲಕವಾಣಿ’ ಮಾಸ ಪತ್ರಿಕೆಯ ಬಿಡುಗಡೆ ಸಮಾರಂಭವು ಮೇ 1ರಂದು ಬೆಳಗ್ಗೆ 11 ಗಂಟೆಗೆ ನಂತೂರು ಸಮೀಪದ ಪದುವಾ ಹೈಸ್ಕೂಲ್ ಬಳಿಯ ಸಿಒಡಿಪಿ ಮದರ್ ಥೆರೆಸಾ ಸಭಾಂಗಣದಲ್ಲಿ ನಡೆಯಲಿದೆ.
ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಪತ್ರಿಕೆ ಬಿಡುಗಡೆ ಮಾಡಲಿದ್ದಾರೆ. ಫೆಡರೇಶನ್ ಆಫ್ ಆಟೊ ರಿಕ್ಷಾ ಡ್ರೈವರ್ಸ್ ಯೂನಿಯನ್‌ನ ಜಿಲ್ಲಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಹಾಯಕ ಸಾರಿಗೆ ಆಯುಕ್ತ ರಮೇಶ್ ಎಂ.ವರ್ಣೇಕರ್, ಜಿಲ್ಲಾ ಕಸಾಪ ಅಧ್ಯಕ್ಷ ಎಸಂ.ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿಗಳಾದ ಎಂ.ಎನ್.ನಾಮದೇವ್, ಪ್ರಸಾದ್ ರಾಜ್ ಕಾಂಚನ್, ಹೈಕೋರ್ಟ್ ನ್ಯಾಯವಾದಿ ಕೆ.ವಿ.ವಿವೇಕಾನಂದ ಪನಿಯಾಲ, ಪ್ರಾಧ್ಯಾಪಕಿ, ಹಾಸ್ಯ ಬರಹಗಾರ್ತಿ ಭುವನೇಶ್ವರಿ ಹೆಗಡೆ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.