ಹಣ ನೀಡುವಂತೆ ಬೆದರಿಕೆ: ದೂರು

Update: 2017-04-30 15:10 GMT

ಕುಂದಾಪುರ, ಎ.30: ವಾಟ್ಸಾಪ್‌ನಲ್ಲಿ ಆಕಸ್ಮಿಕವಾಗಿ ರವಾನೆಯಾದ ಅಶ್ಲೀಲ ವಿಡಿಯೋವನ್ನು ಮುಂದಿಟ್ಟುಕೊಂಡು ಹಣ ನೀಡುವಂತೆ ಬೆದರಿಕೆ ಹಾಕಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುರೋಹಿತ ವೃತ್ತಿ ಮಾಡುತ್ತಿದ್ದ ಕುಂದಾಪುರ ಹೊಸಂಗಡಿ ಕಡೆಪೇಟೆಯ ಪ್ರಮೋದ್(25) ಎಂಬವರು ವಿಕ್ರಮ್ ಶೆಟ್ಟಿ ಎಂಬವರನ್ನು ಸುಮಾರು ನಾಲ್ಕು ತಿಂಗಳ ಹಿಂದೆ ಪರಿಚಯ ಮಾಡಿಕೊಂಡಿದ್ದು, ಅವರಿಗೆ ಎರಡು ತಿಂಗಳ ಹಿಂದೆ ವಾಟ್ಸಾಪ್ ಮೂಲಕ ಆಕಸ್ಮಿಕವಾಗಿ ಅಶ್ಲೀಲ ಚಿತ್ರ ಹಾಗೂ ವಿಡಿಯೋ ರವಾನೆ ಯಾಯಿತು.

 ಈ ಪ್ರಮಾದಕ್ಕೆ ಕ್ಷಮೆ ಕೇಳಿದರೂ ವಿಕ್ರಮ್ ಶೆಟ್ಟಿ ಇದೇ ವಿಚಾರವನ್ನು ಮುಂದಿ ಟ್ಟುಕೊಂಡು ಮಾನ ಹರಾಜು ಮಾಡುವುದಾಗಿ ಹೆದರಿಸಿ ಒಟ್ಟು 1,50,000 ರೂ. ಹಣವನ್ನು ಪಡೆದನು. ಅಲ್ಲದೆ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟು ಎ.19ರಂದು ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ‘ನೀನು ಹಣ ನೀಡದೇ ಇದ್ದಲ್ಲಿ ಈ ವಿಚಾರವನ್ನು ಪತ್ರಿಕೆಯಲ್ಲಿ ಪ್ರಕಟಿಸಿ, ನಿನ್ನ ಮರ್ಯಾದೆಯನ್ನು ತೆಗೆಯು ತ್ತೇನೆ’ ಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News