ಎಟಿಎಂ ಯಂತ್ರ ಕಳವಿಗೆ ಯತ್ನ

Update: 2017-04-30 15:12 GMT

ಹೆಬ್ರಿ, ಎ.30: ಹೆಬ್ರಿ ಸ್ಪಟಿಕ ಪ್ಲಾಜಾದ ವಿನು ನಗರಕ್ಕೆ ಹೋಗುವ ರಸ್ತೆಯಲ್ಲಿ ರುವ ಫೆಡರಲ್ ಬ್ಯಾಂಕಿನ ಎಟಿಎಂ ಯಂತ್ರ ಕಳವಿಗೆ ಯತ್ನಿಸಿರುವ ಘಟನೆ ಎ.29ರಂದು ರಾತ್ರಿ 11:30ರ ಸುಮಾರಿಗೆ ನಡೆದಿದೆ.

  ಬ್ಯಾಂಕಿನ ಶಾಖೆಯ ಬಳಿ ಇರುವ ಎಟಿಎಂ ರೂಮಿಗೆ ಓರ್ವ ಅಪರಿಚಿತ ವ್ಯಕ್ತಿ ನುಗ್ಗಿ ರೂಮಿನೊಳಗೆ ಇದ್ದ ಸಿಸಿ ಟಿವಿ ಕೆಮರಾದ ವೈರನ್ನು ತುಂಡರಿಸಲು ಪ್ರಯತ್ನಿಸಿದನು. ಬಳಿಕ ಎಟಿಎಂ ಯಂತ್ರದಲ್ಲಿನ ಹಣವನ್ನು ಕಳವು ಮಾಡುವ ಉದ್ದೇಶದಿಂದ ಎಟಿಎಂ ಯಂತ್ರವನ್ನು ಸರಿಸಿ ಕಳವಿಗೆ ಪ್ರಯತ್ನಿಸಿದನು ಎಂದು ಬ್ಯಾಂಕಿನ ಶಾಖಾ ಪ್ರಬಂಧಕ ರಾಜೇಶ್ ನಾಯಕ್ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News