‘ಡಾ.ಟಿ.ಎಂ.ಎ.ಪೈ ಅವರದ್ದು ಸಮಾಜದ ಅಭಿವೃದ್ಧಿಯ ಕಲ್ಪನೆ’ : ಡಿ.ಎ.ಪ್ರಸನ್ನ

Update: 2017-04-30 15:17 GMT

ಮಣಿಪಾಲ, ಎ.30: ಉಳಿತಾಯ, ಆರೋಗ್ಯ, ಶಿಕ್ಷಣದ ಮೂಲಕ ವ್ಯಕ್ತಿ ಮತ್ತು ಸಮುದಾಯದ ಅಭಿವೃದ್ಧಿಯ ಕಲ್ಪನೆಗಳನ್ನು ಡಾ.ಟಿ.ಎಂ.ಎ.ಪೈ ಬಹಳ ಹಿಂದೆಯೇ ಕಂಡಿದ್ದರು. ಅವರು ತಂದ ಬದಲಾವಣೆ ರಾಷ್ಟ್ರ ಮಟ್ಟದಲ್ಲೂ ಬಹಳಷ್ಟು ಪರಿಣಾಮ ಬೀರಿದೆ. ಇದು ಅವರ ಕನಸು ಮತ್ತು ಯೋಚನಾಶಕ್ತಿ ಯಿಂದ ಸಾಧ್ಯವಾಯಿತು ಎಂದು ಎಕ್ರೋನ್ ಅಕ್ಯುನೋವ ಸ್ಥಾಪಕ ಡಿ.ಎ.ಪ್ರಸನ್ನ ಹೇಳಿದ್ದಾರೆ.

 ಮಣಿಪಾಲ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಮಣಿಪಾಲದ ಹೊಟೇಲ್ ವ್ಯಾಲಿವ್ಯೆನ ಚೈತ್ಯ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಡಾ.ಟಿ.ಎಂ. ಎ.ಪೈಯವರ 119ನೆಯ ಜನ್ಮದಿನ ‘ಸ್ಥಾಪಕರ ದಿನಾಚರಣೆ’ಯಲ್ಲಿ ಭಾಗವ ಹಿಸಿ ಅವರು ಮಾತನಾಡುತಿದ್ದರು.

ಟಿ.ಎಂ.ಎ.ಪೈ ಅವರ ದೂರದೃಷ್ಟಿ ಬಹುಮುಖದಿಂದ ಕೂಡಿತ್ತು. ಅವರ ಆದರ್ಶವನ್ನು ಅವರ ಮಕ್ಕಳು ಪಾಲಿಸಿಕೊಂಡು ಬರುತ್ತಿದ್ದಾರೆ. ಡಾ.ರಾಮ ದಾಸ್ ಪೈ ಗುಣಮಟ್ಟದೊಂದಿಗೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಹಾಗಾಗಿ ಮಣಿಪಾಲ ಇಂದು ಈ ಮಟ್ಟಕ್ಕೆ ಬೆಳೆದು ನಿಲ್ಲಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಮಣಿಪಾಲ ವಿವಿ ಹಾಸ್ಟೆಲ್ ಸಮಿತಿ ಅಧ್ಯಕ್ಷೆ ವಸಂತಿ ಆರ್. ಪೈ, ಡಾ.ಟಿಎಂಎ ಪೈ ಫೌಂಡೇಶನ್‌ನ ಕೋಶಾಧಿಕಾರಿ ಟಿ.ಅಶೋಕ್ ಪೈ, ಮಣಿಪಾಲ್ ಎಜು ಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್ ಆಡಳಿತ ನಿರ್ದೇಶಕ ಡಾ.ರಂಜನ್ ಪೈ, ಮಣಿಪಾಲ್ ಮೀಡಿಯ ನೆಟ್‌ವರ್ಕ್‌ನ ಆಡಳಿತ ನಿರ್ದೇಶಕ ಟಿ.ಸತೀಶ್ ಯು. ಪೈ, ಮಣಿಪಾಲ್ ಫೈನಾನ್ಸ್ ಕಾರ್ಪೊರೇಶನ್ ಆಡಳಿತ ನಿರ್ದೇಶಕ ಟಿ.ನಾರಾ ಯಣ ಪೈ, ಮಣಿಪಾಲ ಅಕಾಡೆಮಿ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ಉಪಸ್ಥಿತರಿದ್ದರು.

ಮಣಿಪಾಲ ವಿವಿ ಕುಲಪತಿ ಡಾ.ಎಚ್.ವಿನೋದ ಭಟ್ ಸ್ವಾಗತಿಸಿದರು. ಕುಲಸಚಿವ ಡಾ,ನಾರಾಯಣ ಸಭಾಹಿತ್ ವಂದಿಸಿದರು. ಎಂಐಟಿ ಪ್ರಾಧ್ಯಾ ಪಕಿ ಸುಗಂಧಿನಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News