ಮಳೆ ಕೊಯ್ಲು ಮತ್ತು ಜಲ ಮರುಪೂರಣ ಪ್ರಾತ್ಯಕ್ಷಿಕೆ ಕಾರ್ಯಾಗಾರ

Update: 2017-04-30 15:46 GMT

ಮೂಡುಬಿದಿರೆ, ಎ.29 : ಗಂಟಾಲ್‌ಕಟ್ಟೆ ನಿತ್ಯ ಸಹಾಯ ಮಾತಾ ದೇವಾಲಯ, ಮೂಡುಬಿದಿರೆ ಪುರಸಭೆ, ಮೂಡುಬಿದಿರೆ ಜಲ ಸಂರಕ್ಷಣಾ ಸಮಿತಿ, ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರ ಹಾಗೂ ಮೂಡುಬಿದಿರೆ ಕಥೋಲಿಕ್ ಸಭಾ ಇದರ ಸಹಯೋಗದಲ್ಲಿ ಮಳೆಕೊಯ್ಲು ಮತ್ತು ಜಲ ಮರುಪೂರಣ ಪ್ರಾತ್ಯಕ್ಷಿಕೆ ಒಂದು ದಿವಸದ ಕಾರ್ಯಾಗಾರ ಶನಿವಾರ ನಿತ್ಯ ಸಹಾಯ ಮಾತಾ ದೇವಾಲಯದ ವಠಾರದಲ್ಲಿ ಜರುಗಿತು.

ಗಂಟಾಲ್‌ಕಟ್ಟೆ ನಿತ್ಯ ಸಹಾಯ ಮಾತಾ ದೇವಾಲಯದ ವಂದನೀಯ ಗುರು ಜೇಸುದಾಸ್ ಡಿ’ಕೋಸ್ತ ದೀಪ ಬೆಳಗಿಸುವ ಮೂಲಕ ಕಾರ್ಯಗಾರಕ್ಕೆ ಚಾಲನೆ ನೀಡಿದರು.

  ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಸಹ ಪ್ರಾಧ್ಯಾಪಕ ಎಂ.ಎನ್.ಜೋಸೆಫ್, ಮತ್ತು ಮೂಡುಬಿದಿರೆ ಜಲ ಸಂರಕ್ಷಣಾ ಸಮಿತಿಯ ಕಾರ್ಯಧ್ಯಕ್ಷ ಪಿ.ಕೆ. ಥೋಮಸ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಗಾ ನಡೆಸಿಕೊಟ್ಟರು.

ಮೂಡುಬಿದಿರೆ ರೋಟರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಮುರಳಿಕೃಷ್ಣ, ಮೂಡುಬಿದಿರೆ ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ, ಮೂಡುಬಿದಿರೆ ಕಥೋಲಿಕ್ ಸಭಾದ ಅಧ್ಯಕ್ಷ ಹೆರಾಲ್ಡ್ ರೇಗೋ ಉಪಸ್ಥಿತರಿದ್ದರು.

ಗಂಟಾಲ್‌ಕಟ್ಟೆ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಆಲ್ವಿನ್ ಎಸ್. ಮೆನೇಜಸ್ ಸ್ವಾಗತಿಸಿದರು. ಗಂಟಾಲ್‌ಕಟ್ಟೆ ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಆಲ್ವಿನ್ ಮೆನೇಜಸ್ ನಿರೂಪಿಸಿದರು.

ಈ ಸಂದರ್ಭದಲ್ಲಿ ಮಳೆ ಕೊಯ್ಲು ಮತ್ತು ಜಲ ಮರುಪೂರಣ ಪ್ರಾತ್ಯಕ್ಷಿಕೆಯ ಮಾದರಿಗಳನು್ನ ವಿದ್ಯಾರ್ಥಿನಿಯರು ಪ್ರದರ್ಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News