ಚೀನಾ: ಅಮೆರಿಕದ ‘ಗೂಢಚಾರಿ’ ಮಹಿಳೆಯ ಗಡಿಪಾರು

Update: 2017-04-30 16:06 GMT

ವಾಶಿಂಗ್ಟನ್, ಎ. 30: ಗೂಢಚಾರಿಕೆ ಆರೋಪದಲ್ಲಿ ಚೀನಾದಲ್ಲಿ ಎರಡು ವರ್ಷಗಳಿಗೂ ಅಧಿಕ ಅವಧಿಯಲ್ಲಿ ಬಂಧನದಲ್ಲಿದ್ದ ಅಮೆರಿಕದ ಮಹಿಳೆಯೊಬ್ಬರನ್ನು ಅಮೆರಿಕಕ್ಕೆ ಗಡಿಪಾರು ಮಾಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ರವಿವಾರ ಹೇಳಿದೆ.

ಸ್ಯಾಂಡಿ ಫಾನ್-ಗಿಲ್ಲಿಸ್ ವಿರುದ್ಧದ ಗೂಢಚರ್ಯೆ ಆರೋಪ ಇತ್ತೀಚೆಗೆ ಸಾಬೀತಾಗಿತ್ತು. ಆಕೆಗೆ ಮೂರೂವರೆ ವರ್ಷಗಳ ಜೈಲು ಮತ್ತು ಗಡಿಪಾರು ಶಿಕ್ಷೆ ವಿಧಿಸಲಾಗಿತ್ತು.

ಅವರು ಹೂಸ್ಟನ್‌ನ ವ್ಯಾಪಾರಿ ನಿಯೋಗದೊಂದಿಗೆ ಚೀನಾಕ್ಕೆ ಭೇಟಿ ನೀಡಿದ ಬಳಿಕ, 2015 ಮೇ ತಿಂಗಳಲ್ಲಿ ಮಕಾವು ಗಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು.

ಅವರ ವಿರುದ್ಧ ಗೂಢಚರ್ಯೆ, ಸರಕಾರಿ ರಹಸ್ಯಗಳನ್ನು ಕದ್ದ ಆರೋಪಗಳನ್ನು ಹೊರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News