ಉಳ್ಳಾಲ : ಎರಡನೇ ಸುತ್ತಿನ ಪಲ್ಸ್ ಪೋಲಿಯೋ ನಿರ್ವಹಣೆ ಕಾರ್ಯಕ್ರಮ

Update: 2017-04-30 16:11 GMT

ಉಳ್ಳಾಲ,ಎ.30: ಸಮಾಜ ಬೆಳೆಸುವ ಮಕ್ಕಳ ಆರೋಗ್ಯವನ್ನು ಕಾಪಾಡುವ ಸರಕಾರದ ಕಾರ್ಯಕ್ರಮವನ್ನು ಉತ್ತೇಜಿಸುವ ಕಾರ್ಯ ಸಮಾಜಕ್ಕೆ ಪೂರಕವಾದುದು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ಉಳ್ಳಾಲ ನಗರಸಭೆ ಸದಸ್ಯ ಫಾರುಕ್ ಉಳ್ಳಾಲ್ ಅಭಿಪ್ರಾಯಪಟ್ಟರು.

ಅವರು ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಯುನೈಟೆಡ್ ಸೋಷಿಯಲ್ ಮೂವ್‌ಮೆಂಟ್ ಉಳ್ಳಾಲ ಇದರ ಆಶ್ರಯದಲ್ಲಿ ಉಳ್ಳಾಲದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರಗಿದ ಎರಡನೇ ಸುತ್ತಿನ ಪಲ್ಸ್ ಪೋಲಿಯೋ ನಿರ್ವಹಣೆ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

ಸಾಮಾಜಿಕ ಕಳಕಳಿಯೊಂದಿಗೆ ನಿರಾಶ್ರಿತರ ಧ್ವನಿಯಾಗಿ ಆರಂಭಗೊಂಡಿರುವ ಸಂಘಟನೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಉಳ್ಳಾಲಕ್ಕೆ ಬರುವ ಕಟ್ಟಡ ಕಾರ್ಮಿಕರಲ್ಲಿ ಮಲೇರಿಯಾ ಪ್ರಕರಣ ಹೆಚ್ಚಿತ್ತು. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರ ಅದನ್ನು ಹತೋಟಿಗೆ ತರುವಲ್ಲಿ ಬಹಳಷ್ಟು ಶ್ರಮವಹಿಸಿ ಯಶಸ್ವಿಯಾಗಿದೆ. ಹಾಗೆಯೇ ಪಲ್ಸ್ ಪೋಲಿಯೋ ಕುರಿತ ಜಾಗೃತಿ ಸಂಘಟನೆಗಳ ಮೂಲಕ ಮಾಡಿಸುವುದರಿಂದ ಅದರ ಕುರಿತಾಗಿ ಇರುವ ತಪ್ಪು ಕಲ್ಪನೆಗಳು ಜನರಿಂದ ದೂರವಾಗಲಿದೆ. ಇದರಿಂದ ಮಕ್ಕಳ ಆರೋಗ್ಯವನ್ನು ಕಾಪಾಡಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಪ್ರಶಾಂತ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುನೈಟೆಡ್ ಸೋಷಿಯಲ್ ಮೂವ್ ಮೆಂಟಿನ ಟ್ರಸ್ಟಿಗಳಾದ ಮಂಗಳೂರಿನ ಚಾರ್ಟೆಡ್ ಅಕೌಂಟೆಂಟ್ ಯು.ಹೆಚ್.ಅಹಮ್ಮದ್, ಯು.ಕೆ.ಯೂಸುಫ್ ಉಳ್ಳಾಲ್, ರೆಹಮತ್ ಬಸ್ತಿಪಡ್ಪು, ಯು.ಯನ್.ಬಾವಾ ಅಳೇಕಲ, ಕಬೀರ್ ಚೆಯ್ಯಬ್ಬ, ರಝಾಕ್ ಹರೇಕಳ, ಸಿದ್ದೀಖ್ ಯು.ಬಿ ಬಸ್ತಿಪಡ್ಪು, ಬದ್ರುದ್ದೀನ್, ಹಿರಿಯ ಆರೋಗ್ಯ ಸಹಾಯಕಿ ರಾಜಮ್ಮ , ಇಬ್ರಾಹಿಂ ಮುಕ್ಕಚ್ಚೇರಿ ಉಪಸ್ಥಿತರಿದ್ದರು. ಹೈದರ್ ಉಳ್ಳಾಲಬೈಲ್ ಸ್ವಾಗತಿಸಿದರು. ಹೈದರ್ ಹುಸೈನ್ ನಿರ್ವಹಿಸಿದರು. ಕಾರ್ಯಕ್ರಮದ ಸಂಘಟಕ ಹಾಗೂ ಟ್ರಸ್ಟ್ ಸಂಚಾಲಕ ಯು.ಕೆ.ಅಹಮ್ಮದ್ ಬಾವಾ ಕೊಟ್ಟಾರ ವಂದಿಸಿದರು.

 ಉಳ್ಳಾಲದಾದ್ಯಂತ ವಿವಿಧ ಬೂತ್ ಗಳಿಗೆ ತೆರಳಲಿರುವ ಪಾಂಡ್ಯರಾಜ್ ಬಳ್ಳಾಲ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪಲ್ಸ್ ಪೋಲಿಯೋ ಲಸಿಕಾ ಪೆಟ್ಟಿಗೆಯನ್ನು ಸಂಘಟಕರು ವಿತರಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News