ಕ್ಯೂಬಾ: ಸೇನಾ ವಿಮಾನ ಪತನ; 8 ಸೈನಿಕರು ಸಾವು

Update: 2017-04-30 16:14 GMT

ಹವಾನ (ಕ್ಯೂಬ), ಎ. 30: ಕ್ಯೂಬಾದ ಸೇನಾ ವಿಮಾನವೊಂದು ಶನಿವಾರ ಪಶ್ಚಿಮದ ಪ್ರಾಂತ ಅರ್ಟೆಮಿಸದ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿದ್ದು, ಅದರಲ್ಲಿದ್ದ ಕನಿಷ್ಠ ಎಂಟು ಸೈನಿಕರು ಮೃತಪಟ್ಟಿದ್ದಾರೆ ಎಂದು ಸರಕಾರ ತಿಳಿಸಿದೆ.

ಹವಾನದ ಹೊರವಲಯದ ಪ್ಲಾಯ ಬರಕೋವ ವಿಮಾನ ನಿಲ್ದಾಣದಿಂದ ಬೆಳಗ್ಗೆ 6:38ಕ್ಕೆ ಹಾರಾಟ ಆರಂಭಿಸಿದ ಸೋವಿಯತ್ ನಿರ್ಮಿತ ಎಎನ್-26 ವಿಮಾನವು ಸುಮಾರು 65 ಕಿಲೋಮೀಟರ್ ಕ್ರಮಿಸಿದ ಬಳಿಕ ಕ್ಯಾಂಡಲೇರಿಯ ಪಟ್ಟಣದ ಹೊರವಲಯದಲ್ಲಿ ಪತನಗೊಂಡಿತು ಎಂದು ಕ್ಯೂಬ ಸೇನೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News