ದ.ಕ.: ಶೇ. 85.43 ಮಕ್ಕಳಿಗೆ ಪೊಲಿಯೊ ಲಸಿಕೆ

Update: 2017-04-30 16:15 GMT

ಮಂಗಳೂರು, ಎ. 30: ರಾಷ್ಟ್ರೀಯ ಪಲ್ಸ್‌ ಪೋಲಿಯೊ ಯೋಜನೆಯಡಿ ಎರಡನೆ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಶೇ.85.43 ಮಕ್ಕಳಿಗೆ ಪೊಲಿಯೊ ಲಸಿಕೆ ಹಾಕಲಾಗಿದೆ.

ದ.ಕ. ಜಿಲ್ಲೆಯಲ್ಲಿ 21,92,079 ಮಕ್ಕಳಲ್ಲಿ 1,64,965 ಮಕ್ಕಳಿಗೆ ಪೊಲಿಯೊ ಹನಿ ಹಾಕಲು ಉದ್ದೇಶಿಸಲಾಗಿದ್ದು, 140936 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಶೇ. 85.43 ಮಕ್ಕಳಿಗೆ ಲಸಿಕೆ ಹಾಕಿದಂತಾಗಿದೆ.

ಬಂಟ್ವಾಳ ತಾಲೂಕು ಶೇ. 91.91, ಬೆಳ್ತಂಗಡಿ 91.31, ಪುತ್ತೂರು 88.97, ಸುಳ್ಯ 87.49, ಮಂಗಳೂರು ಗ್ರಾಮೀಣ 87.58 ಹಾಗೂ ಮಂಗಳೂರು ಪಟ್ಟಣ 71.02 ಮಕ್ಕಳಿಗೆ ಲಸಿಕೆ ಹಾಕಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News