2025ರ ವೇಳೆಗೆ ಭಾರತದಲ್ಲಿ 40 ಬಿಲಿಯನ್ ಡಾಲರ್ ಮೊತ್ತದ ‘ಪ್ರಭಾವಿ ಹೂಡಿಕೆ’ ಸಾಧ್ಯ: ವರದಿ

Update: 2017-04-30 18:15 GMT

   ಹೊಸದಿಲ್ಲಿ, ಎ.30: ವಿವಿಧ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಅಧಿಕ ಅಂತಸ್ಸತ್ವ ಇರುವ ಕಾರಣ 2025ರ ವೇಳೆಗೆ ಭಾರತದಲ್ಲಿ 40 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ‘ಪ್ರಭಾವಿ ಹೂಡಿಕೆ’ ಆಗಲಿದೆ ಎಂದು ಜಾಗತಿಕ ಸಂಸ್ಥೆ ಜಿಐಐಎನ್ ವರದಿ ಮಾಡಿದೆ.

ಆರ್ಥಿಕ ಪ್ರತಿಫಲದ ಜೊತೆಗೆ ಸಾಮಾಜಿಕ ಮತ್ತು ಪರಿಸರದ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಮಾಡಲಾಗುವ ಹೂಡಿಕೆಯನ್ನು ‘ಪ್ರಭಾವಿ ಹೂಡಿಕೆ’ ಎಂದು ಕರೆಯಲಾಗುತ್ತದೆ.

ಭಾರತದಲ್ಲಿ ಬಡತನ ಹೆಚ್ಚಿಗೆ ಇದ್ದರೂ ಪರಿಹಾರ ಮಾರ್ಗ ಹುಡುಕುವ ಸಂಭಾವ್ಯತೆಯೂ ಇಲ್ಲಿ ಹೆಚ್ಚಿದೆ. ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಪ್ರಭಾವಿ ಹೂಡಿಕೆ ಚಟುವಟಿಕೆಗಳಲ್ಲಿ ಅದ್ಭುತ ಬೆಳವಣಿಗೆ ಸಂಭವಿಸಿದೆ . ಆದ್ದರಿಂದ ಪರಿಸರದ ಮೇಲೆ ಪ್ರಭಾವ ಬೀರುವ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುವ ಸಂಸ್ಥೆಗಳಿಗೆ ಜಾಗತಿಕ ಹೂಡಿಕೆಯ ಕೇಂದ್ರ ಸ್ಥಾನವಾಗಿದೆ ಎಂದು ಜಿಐಐಎನ್‌ನ ದಕ್ಷಿಣ ಏಶ್ಯಾ ಸಲಹೆಗಾರ ಅನಿಲ್ ಸಿನ್ಹ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News