ತನ್ನ ಸ್ನೇಹಿತ ತಯಾರಿಸಿದ ವಿಶೇಷ ಬೀಫ್ ಖಾದ್ಯದ ಕುರಿತು ಕಾಜೋಲ್ ಹೇಳಿದ್ದೇನು?
ಮುಂಬೈ, ಮೇ 1: ಗೋಮಾಂಸದ ಬಗ್ಗೆ ದೇಶಾದ್ಯಂತ ಬಹಳಷ್ಟು ಚರ್ಚೆಗಳು ನಡೆಯುತ್ತಿದ್ದು, ಗೋಮಾಂಸ ನಿಷೇಧಿಸಬೇಕೆಂಬ ಬೇಡಿಕೆಯೂ ಇದೆ. ಆದರೆ ಗೋವಿನ ವಿಚಾರದಲ್ಲಿ ಕೆಲವು ಸರಕಾರಗಳು ತೋರಿಸುವ ಅತಿಯಾದ ಕಾಳಜಿ ಹಲವರಿಂದ ಅಪಹಾಸ್ಯಕ್ಕೂ ಒಳಗಾಗಿದ್ದು, ಮಹಿಳೆಯರಿಗೆ ಇಲ್ಲದ ರಕ್ಷಣೆ ಗೋವುಗಳಿಗೆ ದೊರಕುತ್ತಿದೆಯೆಂದೂ ಹೇಳುತ್ತಿದ್ದಾರೆ.
ಹಲವು ರೆಸ್ಟಾರೆಂಟುಗಳು ಬೀಫ್ ಖಾದ್ಯಗಳನ್ನು ತಯಾರಿಸುವುದನ್ನು ನಿಲ್ಲಿಸಿದ್ದರೆ ಇನ್ನು ಹಲವು ರೆಸ್ಟಾರೆಂಟುಗಳ ಮೆನುವಿನಲ್ಲಿ ಬೀಫ್ ಖಾದ್ಯಗಳು ಈಗಲೂ ಇವೆ. ಇಷ್ಟೆಲ್ಲಾ ಹೇಳಲು ಕಾರಣವೇನೆಂದು ಬಲ್ಲಿರಾ ? ಬಾಲಿವುಡ್ ನಟಿ ಕಾಜೋಲ್.
ಈಕೆ ಇತ್ತೀಚೆಗೆ ತನ್ನ ಸ್ನೇಹಿತನ ಒಡೆತನದ ಪಾಪ್ ಅಪ್ ರೆಸ್ಟಾರೆಂಟ್ ಒಂದಕ್ಕೆ ಊಟಕ್ಕಾಗಿ ಭೇಟಿ ನೀಡಿದ್ದರು. ಆಕೆಯ ಸ್ನೇಹಿತ ರಾಯನ್ ಬೀಫ್ ಪೆಪ್ಪರ್ ವಾಟರ್ ವಿದ್ ಡ್ರೈ ಲೆಂಟಿಲ್ಸ್ ಎಂಡ್ ಡ್ರೈ ಬೀಫ್ ಖಾದ್ಯ ತಯಾರಿಸಿದ್ದರು. ಇದಕ್ಕೆ ನಟಿ ಕಾಜೋಲ್ ಪ್ರತಿಕ್ರಿಯೆ ಊಹಿಸಲೂ ಅಸಾಧ್ಯ. ಆಕೆ ನಗುತ್ತಾ ‘‘ವಿ ಆರ್ ಗೋಯಿಂಗ್ ಟು ಕಟ್ ಹಿಸ್ ಹ್ಯಾಂಡ್ಸ್ ಆಫ್ ಅಫ್ಟರ್ ದಿಸ್.’’ (ಇದರ ನಂತರ ನಾವು ಅವರ ಕೈಗಳನ್ನು ಕಡಿಯಲಿದ್ದೇವೆ) ಎಂದಿದ್ದಾರೆ.