ರಾಜ್ಯ ಸರಕಾರ ಹೇಳದೆ ಕಾರಿನಿಂದ ಕೆಂಪುದೀಪ ತೆಗೆಯಲ್ಲ: ಸಚಿವ ಖಾದರ್
Update: 2017-05-01 11:41 IST
ಮಂಗಳೂರು, ಮೇ 1: ಕೆಂಪು ದೀಪ ಹಾಗೂ ಕಾರನ್ನು ರಾಜ್ಯ ಸರಕಾರ ಕೊಟ್ಟಿದ್ದು, ಸರಕಾರ ಹೇಳುವವರೆಗೆ ಕಾರಿನಿಂದ ಕೆಂಪು ದೀಪ ತೆಗೆಯುವುದಿಲ್ಲ ಎಂದು ಆಹಾರ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರಿ ಕಾರಿಗೆ ದೀಪ ಹಾಕುವ ಮತ್ತು ತೆಗೆಯುವ ಅಧಿಕಾರ ನಮಗಿಲ್ಲ. ಇಲಾಖೆ ಸೂಚಿಸಿದರೆ ಕೆಂಪು ದೀಪವನ್ನು ತೆಗೆಯುತ್ತೇನೆ. ಅದನ್ನು ನನ್ನ ತಲೆ ಮೇಲೆ ಇಟ್ಟುಕೊಂಡಿಲ್ಲ. ಕೆಂಪು ದೀಪ ತೆಗೆದರೆ ಬಡವರ ಹೊಟ್ಟೆ ತುಂಬುವುದಿಲ್ಲ ಎಂದರು.