×
Ad

ದಲಿತ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಯೋಧನ ವಿರುದ್ಧ ಪ್ರಕರಣ ದಾಖಲು

Update: 2017-05-01 11:42 IST

ಕುಂಡರ, ಮೇ. 1: ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿಗೆ ಮದುವೆಯಾಗುವುದಾಗಿ ಮಾತು ಕೊಟ್ಟು ನಿರಂತರ ಲೈಂಗಿಕ ಶೋಷಣೆ ನಡೆಸಿದ್ದಲ್ಲದೆ, ಚಿನ್ನಾಭರಣ,ಹಣವನ್ನು ಪಡೆದು ವಂಚಿಸಿದ ಸೈನಿಕನ ವಿರುದ್ಧ ಪ್ರಕರಣದಾಖಲಿಸಲಾಗಿದೆ. ಬಾಲಕಿಯ ನೆರೆಯ ಸೈನಿಕ ಸತೀಶ್(30) ದಲಿತ ಯುವತಿಯನ್ನು ಮೋಸದಜಾಲದಲ್ಲಿಕೆಡವಿದ ವ್ಯಕ್ತಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಗೆಮೋಸ ಮಾಡಲು ಸತೀಶನಿಗೆ ಸಹಕರಿಸಿದ ಗೆಳೆಯ ಅಜಿತ್‌ವಿರುದ್ಧ ಕೂಡಾ ಪೊಕ್ಸೊ ಕಾನೂನಿನನ್ವಯ ಪ್ರಕರಣದಾಖಲಿಸಲಾಗಿದೆ.

  ಪ್ಲಸ್‌ಟು (ದ್ವಿತೀಯ ಪಿಯುಸಿ) ವಿದ್ಯಾರ್ಥಿನಿಯಾಗಿದ್ದಾಗ 2010ರಿಂದ ಬಾಲಕಿಯನ್ನು ಸೈನಿಕನು ಲೈಂಗಿಕವಾಗಿ ಬಳಸಿಕೊಳ್ಳಲು ಆರಂಭಿಸಿದ್ದಾನೆ. ಎರಡು ವರ್ಷಗಳ  ಹಿಂದೆ ಈತ ಬೇರೊಬ್ಬ ಮಹಿಳೆಯನ್ನು ವಿವಾಹ ಆಗಿದ್ದಾನೆ. ವಂಚನೆಗೆಗುರಿಯಾದೆ ಎಂದು ಅರಿವಾದ ನಂತರ ಹುಡುಗಿ ತಂದೆತಾಯಿ ಗೊತ್ತುಪಡಿಸಿದ ವ್ಯಕ್ತಿಯನ್ನು ವಿವಾಹವಾಗಿದ್ದಳು.

ಮದುವೆಯಾದದ್ದು ತಿಳಿದು ಆರೋಪಿ ಫೋನ್ ಕರೆಮಾಡಿ ಹುಡುಗಿಗೆ ಬೆದರಿಕೆಯೊಡ್ಡಲು ಆರಂಭಿಸಿದ್ದನು. ತನ್ನಲ್ಲಿ ಫೋಟೊ, ವೀಡಿಯೊ ಇದೆ, ಬಂಗಾರ ಮತ್ತು ಹಣ ಕೊಡದಿದ್ದರೆ ಇದನ್ನು ತೋರಿಸಿಕುಟುಂಬ ಸಂಬಂಧವನ್ನೇ ಕೆಡಿಸಿಹಾಕುವೆ ಎಂದು ಸೈನಿಕ ಸತೀಶ ಹುಡುಗಿಗೆ ಬೆದರಿಕೆಯೊಡ್ಡಿದ್ದಾನೆ. ನಂತರ ಆಕೆ ತನ್ನ ಕೈಯಲ್ಲಿದ್ದ ಬಳೆ ಹಾಗೂ ಒಂದು ಲಕ್ಷ ರೂಪಾಯಿಯನ್ನು ಸೈನಿಕನಿಗೆ ಕೊಟ್ಟಿದ್ದಾಳೆ. ಕೈಯಲ್ಲಿದ್ದ ಬಳೆ ಇಲ್ಲದಾದಾಗ ಮನೆಯವರು ವಿಚಾರಿಸಿದ್ದಾರೆ.

ನಡೆದ ಘಟನೆಯನ್ನು ನಂತರ ಮನೆಯವರಿಗೆ ಹುಡುಗಿ ವಿವರಿಸಿದ್ದಾಳೆ. ಹುಡುಗಿಗೆ ವಿಚ್ಛೇದನ ನೀಡಬೇಕೆಂದು ಪತಿಮನೆಯವರು ಒತ್ತಡ ಹಾಕಿದರೂ ಪತಿ ಅದಕ್ಕೆ ಕಿವಿಕೊಡಲಿಲ್ಲ. ತನ್ನ ಮನೆಯಿಂದ ಹೊರಬಂದು ಪತಿ ಬಾಡಿಗೆಗೆ ಬೇರೆ ಮನೆಮಾಡಿದ್ದಾರೆ. ಆನಂತರ ತನ್ನ ಪತ್ನಿಗಾದ ಶೋಷಣೆ, ಮೋಸದ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ವಂಚಕ ಸೈನಿಕನನ್ನು ಬಂಧಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News